ಕೊರೊನಾ ವೈರಸ್ ಎರಡನೇ ಅಲೆಯ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಸೋಂಕಿನ ಅಪಾಯ ಹಾಗೆಯೇ ಇದೆ. ಕೊರೊನಾ ಪೀಡಿತರು ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗಿ 16 ದಿನಗಳ ಕಾಲ ಐಸೋಲೇಷನ್ ನಲ್ಲಿರಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಈ ಮಧ್ಯೆ ತೆಲಂಗಾಣದಲ್ಲಿ ನಡೆದ ಘಟನೆ ಗಮನ ಸೆಳೆದಿದೆ.
ತೆಲಂಗಾಣದಲ್ಲಿ ಅತ್ತೆಯೊಬ್ಬಳು ಸೊಸೆಯನ್ನು ತಬ್ಬಿ ಆಕೆಗೂ ಕೊರೊನಾ ಸೋಂಕು ಹರಡಿದ್ದಾಳೆ. ಅತ್ತೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅತ್ತೆ ಮನೆಯಲ್ಲಿ ಐಸೋಲೇಟ್ ಆಗಿದ್ದಳು. 15 ದಿನಗಳಿಂದ ಕೋಣೆಯಲ್ಲಿದ್ದ ಮಹಿಳೆಗೆ ಮನೆಯವರ ಮೇಲೆ ಕೋಪ ಬಂದಿದೆ. ಸೊಸೆ ಆಹಾರ ನೀಡಲು ಬರ್ತಿದ್ದಂತೆ ಆಕೆಯನ್ನು ತಬ್ಬಿಕೊಂಡಿದ್ದಾಳೆ.
ಕೊರೊನಾ ಪರೀಕ್ಷೆ ಮಾಡಿಸಿದಾಗ ಸೊಸೆಗೂ ಸೋಂಕು ಕಾಣಿಸಿಕೊಂಡಿದೆ. ಸೊಸೆಗೆ ಸೋಂಕು ಕಾಣಿಸಿಕೊಳ್ತಿದ್ದಂತೆ ಆಕೆಯನ್ನು ಮನೆಯಿಂದ ಹೊರಹಾಕಿದ್ದಾಳೆ ಅತ್ತೆ. ಎರಡು ಮಕ್ಕಳ ಪೀಡಿತೆ, ತಾಯಿ ಮನೆಯಲ್ಲಿದ್ದಾಳೆ. ಆಕೆ ಪೊಲೀಸರಿಗೆ ದೂರು ನೀಡಿದಲ್ಲಿ ಸೂಕ್ತ ಕ್ರಮಕೈಗೊಳ್ಳಲು ಸಿದ್ಧವೆಂದು ಅಧಿಕಾರಿಗಳು ಹೇಳಿದ್ದಾರೆ.