alex Certify BIG NEWS​: ಕೇಂದ್ರ ಸರ್ಕಾರದಿಂದ ʼಶಿಕ್ಷಕರ ಅರ್ಹತಾ ಪರೀಕ್ಷೆʼ ಪ್ರಮಾಣಪತ್ರದ ಸಿಂಧುತ್ವ ಜೀವಿತಾವಧಿವರೆಗೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS​: ಕೇಂದ್ರ ಸರ್ಕಾರದಿಂದ ʼಶಿಕ್ಷಕರ ಅರ್ಹತಾ ಪರೀಕ್ಷೆʼ ಪ್ರಮಾಣಪತ್ರದ ಸಿಂಧುತ್ವ ಜೀವಿತಾವಧಿವರೆಗೆ ವಿಸ್ತರಣೆ

ಕೇಂದ್ರ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣಪತ್ರದ ಅವಧಿಯನ್ನ ವಿಸ್ತರಿಸಲು ನಿರ್ಧರಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಲ್​ ‘ನಿಶಾಂಕ್​’ ಹೇಳಿದ್ದಾರೆ .

ಈ ಹಿಂದೆ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರದ ಸಿಂಧುತ್ವ 7 ವರ್ಷಗಳವರೆಗೆ ಇತ್ತು. ಈ ಹೊಸ ನಿಯಮದ ಬಳಿಕ 2011ರ ನಂತರದ ಪ್ರಮಾಣ ಪತ್ರಗಳು ಜೀವಿತಾವಧಿಯವರೆಗೂ ಸಿಂಧುತ್ವ ಪಡೆದಿರುತ್ತವೆ.

ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರದ ಸಿಂಧುತ್ವವನ್ನ ವಿಸ್ತರಿಸುವ ಬಗ್ಗೆ ಎನ್​ಸಿಟಿಇ ಕಳೆದ ವರ್ಷ ಸೆಪ್ಟೆಂಬರ್​ನಲ್ಲೇ ಚರ್ಚೆ ನಡೆಸಿತ್ತು. ಇದೀಗ ಕೇಂದ್ರ ಶಿಕ್ಷಣ ಸಚಿವಾಲಯ ಇದಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಈ ಘೋಷಣೆಯನ್ನ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಭವಿಷ್ಯವನ್ನ ರೂಪಿಸಿಕೊಳ್ಳಲು ಇಚ್ಚಿಸುವವರಿಗೆ ಇದು ಖಂಡಿತವಾಗಿಯೂ ಲಾಭಕಾರಿಯಾದ ಸುದ್ದಿಯಾಗಿದೆ ಎಂದು ರಮೇಶ್​ ಪೋಖ್ರಿಯಲ್​ ಹೇಳಿದ್ದಾರೆ.

ಅಲ್ಲದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಶಿಕ್ಷಣ ಇಲಾಖೆಗಳು ಈಗಾಗಲೇ 7 ವರ್ಷ ಅವಧಿಯನ್ನ ಪೂರೈಸಿರುವ ಪ್ರಮಾಣ ಪತ್ರಗಳನ್ನ ನವೀಕರಣ ಮಾಡಲು ಸೂಕ್ತ ಕ್ರಮವನ್ನ ಕೈಗೊಳ್ಳಿ ಎಂದು ಪೋಖ್ರಿಯಲ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...