
ಸ್ಪೇನ್ ನಲ್ಲಿ ಭಿನ್ನ ಪ್ರತಿಭಟನೆ ನಡೆಯುತ್ತಿದೆ. ಶಾಲಾ ಶಿಕ್ಷಕರು ಸ್ಕರ್ಟ್ ಧರಿಸಿ ಶಾಲೆಗೆ ಬರ್ತಿದ್ದಾರೆ. ಶಿಕ್ಷಕರು ಮಾತ್ರವಲ್ಲ ಸಾರ್ವಜನಿಕರು ಕೂಡ ಸ್ಕರ್ಟ್ ಧರಿಸಲು ಶುರು ಮಾಡಿದ್ದಾರೆ.
ವರದಿ ಪ್ರಕಾರ, 2020ರ ಅಕ್ಟೋಬರ್ ನಲ್ಲಿ ಸ್ಪೇನ್ ಶಾಲೆಯೊಂದರಲ್ಲಿ ಸ್ಕರ್ಟ್ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಲಾಗಿತ್ತು. ಮಾನಸಿಕ ಅಸ್ವಸ್ಥತೆ ಹೆಸರಿನಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಇದನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನ ನಡೆಯುತ್ತಿದೆ. ಶಿಕ್ಷಕರು ಮಾತ್ರವಲ್ಲ ಇನ್ನೂ ಅನೇಕರು ಸ್ಕರ್ಟ್ ಧರಿಸಿ ಪ್ರತಿಭಟಿಸುತ್ತಿದ್ದಾರೆ.
ಲಿಂಗ ತಾರತಮ್ಯ ಕಡಿಮೆ ಮಾಡಲು ಈ ಅಭಿಯಾನ ನಡೆಯುತ್ತಿದೆ. ದಿ ಕ್ಲೋತ್ಸ್ ಹ್ಯಾವ್ ನೋ ಜಂಡರ್ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದೆ. ಶಾಲೆಯಿಂದ ಹೊರ ಹಾಕಿದ ನಂತ್ರ ವಿದ್ಯಾರ್ಥಿ ಟಿಕ್ ಟಾಕ್ ನಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದ. ಸ್ತ್ರಿವಾದವನ್ನು ಬೆಂಬಲಿಸಲು ಸ್ಕರ್ಟ್ ಧರಿಸಿದ್ದಾಗಿ ಆತ ಹೇಳಿಕೊಂಡಿದ್ದಾನೆ.
ವಿದ್ಯಾರ್ಥಿಯನ್ನು ಬೆಂಬಲಿಸಿ ಕಳೆದ ನಾಲ್ಕೈದು ತಿಂಗಳಿಂದ ಅಭಿಯಾನ ನಡೆಯುತ್ತಿದೆ. ಅನೇಕ ಶಿಕ್ಷಕರು ಸ್ಕರ್ಟ್ ಧರಿಸಿ ಬರ್ತಿದ್ದಾರೆ. ಪ್ರಸಿದ್ಧಿಗಾಗಿ ಸ್ಕರ್ಟ್ ಧರಿಸುತ್ತಿಲ್ಲ. ಲಿಂಗ ತಾರತಮ್ಯ ತೊಡೆದು ಹಾಕಲು ಹೀಗೆ ಮಾಡಲಾಗ್ತಿದೆ ಎಂದು ಶಿಕ್ಷಕರು ಹೇಳಿದ್ದಾರೆ.