ಕೊರೊನಾ ಆತಂಕವೇ ಇನ್ನೂ ಬೆಂಬಿಡಿದೇ ಕಾಡುತ್ತಿರುವಾಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಕೂಡ ತಲೆನೋವಿಗೆ ಕಾರಣವಾಗಿದೆ.
ಈ ಸಂಬಂಧ ರಾಯಚೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಬ್ಲಾಕ್ ಫಂಗಸ್ನಂತಹ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗೆ ನೀಡಬೇಕಾದ ಸೂಕ್ತ ಇಂಜೆಕ್ಷನ್ ಇಲ್ಲ. ಬೇರೆ ದೇಶಗಳಿಂದ ಕೇಂದ್ರ ಸರ್ಕಾರ ಚುಚ್ಚುಮದ್ದನ್ನ ತರಿಸಿಕೊಳ್ತಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚುಚ್ಚುಮದ್ದನ್ನ ಪೂರೈಕೆ ಮಾಡುವ ಭರವಸೆ ನೀಡಿದೆ. ಬ್ಲಾಕ್ ಫಂಗಸ್ ಬಂದವರಿಗೆ 40 – 45 ದಿನಗಳ ಕಾಲ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಈ ಚಿಕಿತ್ಸೆಯ ಖರ್ಚನ್ನ ಸರ್ಕಾರವೇ ಭರಿಸುತ್ತಿದೆ ಎಂದು ಹೇಳಿದ್ದಾರೆ.