alex Certify ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ

covered in honey to attract bee

ಈಜಿಪ್ಟ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ ಮಾಡಿದ್ದರು ಎನ್ನಲಾಗಿದೆ.

ಮಗನ ಕೈ, ಕಾಲುಗಳನ್ನು ಕಂಬಕ್ಕೆ ಕಟ್ಟಿದ ತಂದೆ ದೇಹಕ್ಕೆ ಜೇನುತುಪ್ಪ ಸವರಿದ್ದಾನೆ. ಜೇನು ತುಪ್ಪದ ವಾಸನೆಗೆ ಜೇನು ಹುಳುಗಳ ಮಗನ ಹತ್ತಿರ ಬರಲಿ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾನೆ.

ಪೀಡಿತ ಮಗುವಿನ ಹೆಸರು ಮೊಹಮ್ಮದ್ ಡಿ ಎನ್ನಲಾಗಿದೆ. ಮೊಹಮ್ಮದ್ ಡಿ ಕಳ್ಳತನ ಮಾಡ್ತಾನೆಂದು ಪಕ್ಕದ ಮನೆಯವರು ಆರೋಪ ಮಾಡಿದ್ದರು ಎನ್ನಲಾಗಿದೆ. ಮರದ ಕೋಲಿಗೆ ಕೈ-ಕಾಲುಗಳನ್ನು ಕಟ್ಟಿ ನಂತ್ರ ಕಂಬಕ್ಕೆ ಮಗನನ್ನು ಕಟ್ಟಿದ್ದಾನೆ. ಮಗನ ಮೇಲೆ ಜೇನುಹುಳಗಳು ದಾಳಿ ನಡೆಸಿವೆ. ಇದ್ರ ಫೋಟೋವನ್ನು ತಾಯಿ ಕ್ಲಿಕ್ಕಿಸಿದ್ದಾಳೆ. ಇದನ್ನೇ ತಂದೆ ವಿರುದ್ಧದ ಸಾಕ್ಷಿಯಾಗಿ ಪಡೆಯಲಾಗ್ತಿದೆ.

29 ವರ್ಷದ ಮೊಹಮ್ಮದ್ ಡಿ ತಾಯಿ, ಮಕ್ಕಳ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದಾಳೆ. ಪತಿ ತನ್ನ ಮೇಲೆ ಹಲ್ಲೆ ನಡೆಸಿ ನಂತ್ರ ಮಗನಿಗೆ ಚಿತ್ರಹಿಂಸೆ ನೀಡಿದ್ದಾನೆಂದು ದೂರಿದ್ದಾಳೆ.  34 ವರ್ಷದ ತಂದೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...