ಕೊರೋನಾದಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸಿದವರಲ್ಲಿ ಮಕ್ಕಳು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವಯೋ ಸಹಜವಾಗಿ ಸಿಗಬೇಕಾದ ಶೈಕ್ಷಣಿಕ ಕಲಿಕೆಗೆ ಅವಕಾಶ ಸಿಗುತ್ತಿಲ್ಲ. ಬಯಲಲ್ಲಿ ಆಟವಾಡಲು ಅವಕಾಶವಿಲ್ಲ. ಸ್ನೇಹಿತರೊಂದಿಗೆ ಮಾತನಾಡಲು, ಕಾಲ ಕಳೆಯಲು ಅನುಕೂಲ ಸಿಗುತ್ತಿಲ್ಲ.
ಮನೆಯಲ್ಲೇ ಉಳಿದು ನಾಲ್ಕು ಗೋಡೆಯೊಳಗೆ ಬಂಧಿಯಾದ ಮಕ್ಕಳು ಅದೇ ಕ್ರೆಯಾನ್ಸ್ ಗಳಿಂದ ಚಿತ್ರ ಬಿಡಿಸಿ ಬೇಸತ್ತಿದ್ದಾರೆ. ಹಾಗಾದರೆ ಅವರನ್ನು ಬೋರ್ ನಿಂದ ಹೊರತರುವುದು ಹೇಗೆ?
ಮಕ್ಕಳಿಗೆಂದೇ ಟೈಮ್ ಟೇಬಲ್ ಸೆಟ್ ಮಾಡಿ. ಓದಲು ಬರೆಯಲು ಸಮಯವಿರುವಂತೆ ಆಟವಾಡಲೂ ಸಮಯವಿಡಿ. ನಿಮಗೆ ಫ್ರೀ ಇರುವ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡಿ. ಪೋಷಕರೇ ಸದ್ಯ ಮಕ್ಕಳ ಗೆಳೆಯರು ಎಂಬುದು ನಿಮಗೆ ನೆನಪಿರಲಿ.
ಇನ್ನೊಂದು ಮಗುವಿನೊಂದಿಗೆ ಹೋಲಿಸದಿರಿ. ಕ್ರೀಡಾ ಸಾಧಕರ, ಸ್ಪೂರ್ತಿದಾಯಕ ಕತೆಗಳನ್ನು ಮಕ್ಕಳಿಗೆ ಹೇಳಿ. ಅವರಿಗೆ ದಿನಕ್ಕೊಬ್ಬ ಖ್ಯಾತ ನಾಮರ ಪರಿಚಯ ಮಾಡಿಸುತ್ತಾ ಹೋಗಿ. ದಿನವಿಡೀ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ.