ಕೊರೋನಾ ಪಾಸಿಟಿವ್ ಬಂದಿದೆ ಎಂದಾಕ್ಷಣ ಕಂಗಾಲಾಗಬೇಕಿಲ್ಲ. ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ ನೀವು ಒತ್ತಡ ರಹಿತರಾಗಬಹುದು.
ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗದೆಯೇ ಗುಣಮುಖರಾಗುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರಲಿ. ಸೋಂಕು ಲಕ್ಷಣ ಕಂಡು ಬಂದರೆ ಪರೀಕ್ಷೆಯ ಫಲಿತಾಂಶ ಬರುವ ತನಕ ಕಾಯುವ ಬದಲು, ಆರಂಭದಲ್ಲೇ ಐಸೋಲೇಟ್ ಆಗಿ. ಮನೆಯಲ್ಲೇ ಇದ್ದು ಇತರರಿಂದ ಅಂತರ ಕಾಯ್ದುಕೊಳ್ಳಿ.
ಮನೆಯಲ್ಲೇ ಜ್ವರ ಹಾಗೂ ಆಕ್ಸಿಜನ್ ಪರೀಕ್ಷೆ ಮಾಡಿಕೊಳ್ಳಿ. ಆತಂಕ ಪಡುವಷ್ಟು ಅನಾರೋಗ್ಯ ಇದ್ದರೆ ಮಾತ್ರ ತುರ್ತು ಸಹಾಯವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ.
ಇದರ ಹೊರತಾಗಿ ಉಸಿರಾಟದಲ್ಲಿ ಸಮಸ್ಯೆಗಳಿದ್ದರೆ, ಎದೆಭಾಗದಲ್ಲಿ ನೋವು ಕಾಣಿಸಿಕೊಂಡರೆ, ಏಳಲು ಆಗದಂಥ ಪರಿಸ್ಥಿತಿ ಉಂಟಾದರೆ, ತುಟಿಗಳ ಬಣ್ಣ ಬದಲಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕೊರೋನಾ ನಿವಾರಣೆಗೆ ಮುಖ್ಯವಾಗಿ ಬೇಕಾಗುವುದು ಮನೋಬಲ ಮತ್ತು ಮನೋಸ್ಥೈರ್ಯ ಎಂಬುದನ್ನು ನೆನಪಿಟ್ಟುಕೊಳ್ಳಿ.