ನವದೆಹಲಿ: ನ್ಯಾಷನಲ್ ಪೆನ್ಶನ್ ಸಿಸ್ಟಮ್(NPS) ಮೂಲಕ ಚಂದಾದಾರರು ತಮ್ಮ ಖಾತೆಯಲ್ಲಿನ ಪೂರ್ಣ ಠೇವಣಿ ಹಿಂಪಡೆಯಲು ಅನುಕೂಲ ಮಾಡಿಕೊಡಲಾಗುವುದು.
ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ದೆವಲಪ್ಮೆಂಟ್ ಅಥಾರಿಟಿ ಈ ಬಗ್ಗೆ ಕ್ರಮ ಕೈಗೊಂಡಿದೆ. ಎನ್ಪಿಎಸ್ ಖಾತೆಯಿಂದ ಚಂದಾದಾರರು ಗರಿಷ್ಠ 2 ಲಕ್ಷ ರೂ. ಹಿಂಪಡೆಯಬಹುದಾಗಿದ್ದು, ಈ ಮಿತಿ ದಾಟಿ ಹೆಚ್ಚು ಹಣ ಹಿಂಪಡೆಯುವುದಾದರೆ ಒಟ್ಟು ಮೊತ್ತದ ಶೇಕಡ 60 ರಷ್ಟು ಹಣವನ್ನು ಹಿಂಪಡೆದುಕೊಳ್ಳಬಹುದು. ಕನಿಷ್ಠ ಶೇಕಡ 40 ರಷ್ಟು ಹಣವನ್ನು ಖಾತೆಯಲ್ಲಿ ಭವಿಷ್ಯ ನಿಧಿಗಾಗಿ ಇಡಬೇಕಿದೆ.
ಚಂದಾದಾರರ ಅನುಕೂಲಕ್ಕಾಗಿ ಅವರ ಖಾತೆಯಲ್ಲಿನ ಸಂಪೂರ್ಣ ಮೊತ್ತ, ಗರಿಷ್ಠ 5 ಲಕ್ಷ ರೂಪಾಯಿವರೆಗೆ ಹಿಂಪಡೆಯಲು ಅವಕಾಶ ನೀಡುವ ಚಿಂತನೆ ಇದೆ ಎಂದು ಹೇಳಲಾಗಿದೆ.