ಲಿಂಗಸಮಾನತೆ ಎಂಬ ವಿಚಾರವು ಒಮ್ಮೊಮ್ಮೆ ಅತಿರೇಕಕ್ಕೆ ತಲುಪಿ ಚಿತ್ರವಿಚಿತ್ರವಾದ ಅಭಿಯಾನಗಳೆಲ್ಲಾ ನಡೆಯುವುದನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಸಾಕಷ್ಟು ನೋಡಿದ್ದೇವೆ.
ಸ್ಪೇನ್‌ನಾದ್ಯಂತ ಪುರುಷ ಶಿಕ್ಷಕರೆಲ್ಲಾ ಸೇರಿಕೊಂಡು ’ವಸ್ತ್ರಸಮಾನತೆ’ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಕಳೆದ ವರ್ಷ ಸ್ಕರ್ಟ್ ಧರಿಸಿಕೊಂಡು ಶಾಲೆಗೆ ಬಂದು ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿಯೊಬ್ಬನ ನೆರವಿಗೆ ನಿಂತಿದ್ದಾರೆ.
ಹುಡುಗರು ಸ್ಕರ್ಟ್‌ನಂಥ ಹುಡುಗಿಯರ ಬಟ್ಟೆ ಧರಿಸುವಂತಿಲ್ಲ ಎಂಬ ಮಾತಿಗೆ ವಿರೋಧವಾಗಿ ಪುರುಷ ಶಿಕ್ಷಕರು ಈ ಪ್ರತಿಭಟನೆಗೆ ಮುಂದಾಗಿದ್ದಾರೆ.
’ಬಟ್ಟೆಗಳಿಗೆ ಯಾವುದೇ ಲಿಂಗವಿಲ್ಲ’ ಅಭಿಯಾನವು 2020ರಿಂದಲೂ ಪ್ರತಿನಿತ್ಯ ಇನ್ನೂ ಪ್ರಖರವಾಗಿ ಬೆಳೆಯುತ್ತಾ ಸಾಗಿದೆ. ಇತ್ತೀಚೆಗೆ 30ರ ಮಧ್ಯದ ವಯಸ್ಸಿನ ಇಬ್ಬರು ಶಿಕ್ಷಕರು ತಮ್ಮ ಎಂದಿನ ಟ್ರೌಸರ್‌ಗಳ ಬದಲಿಗೆ ಸ್ಟೈಲಿಶ್ ಸ್ಕರ್ಟ್ ಧರಿಸಿಕೊಂಡು ಶಾಲೆಗೆ ಬರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು.
ಇಲ್ಲಿನ ವಲ್ಲಾಡಾಲಿಡ್ ಎಂಬ ಊರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಅನಿಮೀ ಟೀ-ಶರ್ಟ್ ಧರಿಸಿಕೊಂಡು ಬಂದಿದ್ದ ಎಂಬ ಕಾರಣಕ್ಕೆ ಆತನನ್ನು ತರಗತಿಯಿಂದ ಹೊರಹಾಕಿದ್ದನ್ನು ಪ್ರಶ್ನಿಸಿ ಮ್ಯಾನುಯೆಲ್ ಒರ್ಟೆಗಾ ಹಾಗೂ ಬೋರಾ ವೆಲಾಝ್‌ಕೆಝ್ ಹೆಸರಿನ ಈ ಶಿಕ್ಷಕರು ಆತನಿಗೆ ಬೆಂಬಲ ಸೂಚಿಸಿ ಈ ಅಭಿಯಾನಕ್ಕೆ ಮುಂದಾಗಿದ್ದಾರೆ.