ಕೋವಿಡ್ 19ನಿಂದಾಗಿ ಎಲ್ಲರ ಜೀವನ ನಿರ್ವಹಣೆಯೂ ಸಂಕಷ್ಟಕರವಾಗಿ ಹೋಗಿದೆ. ಅದರಲ್ಲೂ ಲೈಂಗಿಕ ಕಾರ್ಯಕರ್ತೆYರ ಬಾಳಂತೂ ಹೇಳತೀರದಾಗಿದೆ. ಆರೋಗ್ಯದ ಸಮಸ್ಯೆ ಒಂದೆಡೆಯಾದರೆ ಅಗತ್ಯ ವಸ್ತುಗಳನ್ನ ಖರೀದಿ ಮಾಡೋಕೆ ಹಣವಿಲ್ಲದೇ ಲೈಂಗಿಕ ಕಾರ್ಯಕರ್ತೆಯರು ಪರದಾಡುವಂತಾಗಿದೆ.
ಲೈಂಗಿಕ ಕಾರ್ಯಕರ್ತೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಎನ್ಜಿಓಗಳು ಇವರ ಕಷ್ಟವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿವೆ. ಅವರಿಗೆ ಮನೆಗೆ ಬಾಡಿಗೆ ಕಟ್ಟಲು ಹಣವಿಲ್ಲ. ಅವರ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲೂ ಆರ್ಥಿಕ ಸಂಕಷ್ಟ ಬಿಡುತ್ತಿಲ್ಲ. ಇಡೀ ತಿಂಗಳಿಗೆ ಸಾಲುವಷ್ಟು ದಿನಸಿ ಖರೀದಿ ಮಾಡಲಾಗದ ದುಃಸ್ಥಿತಿಯಲ್ಲಿ ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ ಎಂದು ಎನ್ಜಿಓ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಆಘಾತಕಾರಿ ಮಾಹಿತಿ ಹೊರಹಾಕಿದ ಸಹೇಲಿ ಕಾರ್ಯಕರ್ತ ಸಂಘದ ಎಕ್ಸಿಕ್ಯೂಟಿವ್ ತೇಜಸ್ವಿ ಸೇವೆಕರಿ, ಕಳೆದ ತಿಂಗಳು ಉದ್ಯಮದಲ್ಲಿ ಲಾಭವಿಲ್ಲದೇ ಆಕ್ರೋಶದಲ್ಲಿದ್ದ ಮಾಲೀಕರು ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಸಂಕಷ್ಟದ ದಿನಗಳ ಬಗ್ಗೆ ಮಾತನಾಡಿದ ಪುಣೆ ಮೂಲದ ಲೈಂಗಿಕ ಕಾರ್ಯಕರ್ತೆ ಒಬ್ಬರು ಕೊರೊನಾ ಆರಂಭವಾಗೋದಕ್ಕೂ ಮುನ್ನ ನಾವು ತಿಂಗಳಿಗೆ 10 ರಿಂದ 12 ಸಾವಿರ ರೂಪಾಯಿ ಸಂಪಾದಿಸುತ್ತಿದ್ದೆವು. ಆದರೆ ಮಾರ್ಚ್ 2020ರಿಂದ ಒಂದು ರೂಪಾಯಿ ಆದಾಯ ಕೂಡ ಸಿಗ್ತಿಲ್ಲ ಎಂದು ಅಳಲನ್ನ ತೋಡಿಕೊಂಡಿದ್ದಾರೆ.