alex Certify ‌ಮಸೀದಿಯೊಳಗೆ ಅಪ್ರಾಪ್ತೆ ಮೇಲೆ ಅತ್ಯಾಚಾರ; ಮೌಲ್ವಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಮಸೀದಿಯೊಳಗೆ ಅಪ್ರಾಪ್ತೆ ಮೇಲೆ ಅತ್ಯಾಚಾರ; ಮೌಲ್ವಿ ಅರೆಸ್ಟ್

ಈಶಾನ್ಯ ದೆಹಲಿಯ ಮಸೀದಿಯೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 48 ವರ್ಷದ ಮೌಲ್ವಿಯನ್ನ ಪೊಲೀಸರು ಬಂಧಿಸಿದ್ದಾರೆ.‌

ರಾಜಸ್ಥಾನದ ಭರತಪುರದ ಮೂಲದವನಾದ ಅತ್ಯಾಚಾರಿ ಮೌಲ್ವಿಯನ್ನ ದೆಹಲಿ ಪೊಲೀಸರು ಲೋನಿ ಜಿಲ್ಲೆಯ ಘಾಜಿಯಾಬಾದ್​ ಎಂಬಲ್ಲಿ ಬಂಧಿಸಿದ್ದಾರೆ.

ಅತ್ಯಾಚಾರಿಯ ವಿರುದ್ಧ ಐಪಿಸಿ ಸೆಕ್ಷನ್​ 376( ಅತ್ಯಾಚಾರ) ಹಾಗೂ ಪೊಸ್ಕೋ ಸಂಬಂಧಿ ಇನ್ನಿತರ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೌಲ್ವಿಯನ್ನ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಮೌಲ್ವಿ ಘಾಜಿಯಾಬಾದ್​ನ ಲೋನಿಯಲ್ಲಿ ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.

ಭಾನುವಾರ ಸಂಜೆ 12 ವರ್ಷದ ಬಾಲಕಿ ನೀರು ತರಲು ಮಸೀದಿ ಬಳಿಗೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಸೀದಿಯಿಂದ ಮನೆಗೆ ಬಂದ ಬಾಲಕಿ ತನಗಾದ ಅನುಭವವನ್ನ ಪೋಷಕರ ಮುಂದೆ ಹೇಳಿಕೊಂಡಿದ್ದಾಳೆ. ಪೋಷಕರು ಮಗಳ ಪರವಾಗಿ ಮೌಲ್ವಿ ವಿರುದ್ಧ ದೂರನ್ನ ದಾಖಲಿಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜನರು ಮಸೀದಿ ಎದುರು ಪ್ರತಿಭಟನೆಗೆ ಮುಂದಾಗಿದ್ದರಿಂದ ಜನರನ್ನ ಚದುರಿಸಲು ಮಸೀದಿ ಸುತ್ತ ಪೊಲೀಸರನ್ನ ನಿಯೋಜಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...