2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿಯ ಬೋರ್ಡ್ ಎಕ್ಸಾಂನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಕೂಡ ಕೇಂದ್ರದ ಹಾದಿಯನ್ನೇ ತುಳಿಯುವ ನಿರ್ಧಾರ ಮಾಡಿದೆ.
ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ರಿಲೀಫ್ ಎಂಬಂತೆ ಮಧ್ಯ ಪ್ರದೇಶದಲ್ಲಿ 12ನೇ ತರಗತಿ ಬೋರ್ಡ್ ಎಕ್ಸಾಂನ್ನು ರದ್ದು ಮಾಡಲಾಗಿದೆ. ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಮಹತ್ವದ ಘೋಷಣೆಯನ್ನ ಮಾಡಿದ್ದಾರೆ.
ಮಧ್ಯ ಪ್ರದೇಶದಲ್ಲಿ 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನ ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಂತರ ಚಿಂತೆ ಮಾಡೋಣ. ಪ್ರಸ್ತುತ ಸಂದರ್ಭದಲ್ಲಿ ಅವರ ಜೀವ ಉಳಿಸೋದು ನಮ್ಮ ಮೊದಲ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡಲು ನಾವು ಸಚಿವರ ಕಮಿಟಿ ಮಾಡಿದ್ದು ಅವರು ತಜ್ಞರನ್ನ ಸಂಪರ್ಕಿಸಲಿದ್ದಾರೆ ಎಂದು ಚೌಹಾಣ್ ಹೇಳಿದ್ರು.
ಇಂದು ಬೆಳಗ್ಗೆಯಷ್ಟೇ ಹರಿಯಾಣ ಹಾಗೂ ಗುಜರಾತ್ ಕೂಡ ತಮ್ಮ ರಾಜ್ಯಗಳಲ್ಲಿ ಪರೀಕ್ಷೆಯನ್ನ ರದ್ದು ಮಾಡ್ತಿರೋದಾಗಿ ಘೋಷಣೆ ಮಾಡಿದ್ದವು.
ಇತ್ತ ತಮಿಳುನಾಡು ಕೂಡ 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನ ನಡೆಸಬೇಕೋ ಅಥವಾ ಬೇಡ್ವೋ ಅನ್ನೋದರ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳೋದಾಗಿ ಹೇಳಿದೆ.