ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ನೌಕರರ ವೇತನ ಹೆಚ್ಚಳ ಹಾಗೂ ಬಡ್ತಿ ಸಮಯ ಬಂದಿದೆ. ನೌಕರರು ಸ್ವಯ ಮೌಲ್ಯಮಾಪನವನ್ನು ನೀಡಬೇಕಾಗಿದೆ. ಜೂನ್ 30ರೊಳಗೆ ಸ್ವಯಂ ಮೌಲ್ಯಮಾಪನವನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕಾಗಿದೆ.
ಮೌಲ್ಯಮಾಪನಕ್ಕಾಗಿ ಇಪಿಎಫ್ಒ, ಎಪಿಎಆರ್ ಬಿಡುಗಡೆ ಮಾಡಿದೆ. ಇದು ಹೆಚ್ ಆರ್ ಸಾಫ್ಟ್ ಆನ್ಲೈನ್ ವಿಂಡೋ ಆಗಿದ್ದು, ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ ನೌಕರರಿಗೆ ಇದು ಲಭ್ಯವಿದೆ. ಈ ನೌಕರರು ಎಪಿಎಆರ್ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 31, 2021ರವರೆಗೆ ವಿಸ್ತರಿಸಲಾಗಿದೆ. ಫೆಬ್ರವರಿ 28, 2021ರಲ್ಲಿ ನಿವೃತ್ತಿ ಹೊಂದಿದ ನೌಕರರಿಗೂ ಇದ್ರ ಲಾಭ ಸಿಗಲಿದೆ.
ಈ ವಿಂಡೋಗೆ ಹೋಗಿ ನೌಕರರು ವಿಮರ್ಶೆ ಮತ್ತು ವರದಿಯನ್ನು ಸಲ್ಲಿಸಬಹುದಾಗಿದೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ 2020-21ರ ಮೌಲ್ಯಮಾಪನವನ್ನು ಮುಂದೂಡಲಾಗಿತ್ತು. ಮೇ 31, 2021 ರೊಳಗೆ ಮೌಲ್ಯಮಾಪನ ಪೂರ್ಣಗೊಳ್ಳಬೇಕಿತ್ತು. ಆದ್ರೆ ಅವಧಿ ವಿಸ್ತರಣೆ ಮಾಡಲಾಗಿದೆ. ಜೂನ್ 30ರೊಳಗೆ ನೌಕರರು ಸ್ವಯಂ ಮೌಲ್ಯಮಾಪನ ವರದಿಯನ್ನು ಅಧಿಕಾರಿಗೆ ಸಲ್ಲಿಸಬೇಕು. ಇದರ ನಂತರ ಅದು ಪರಿಶೀಲನಾ ಅಧಿಕಾರಿಗೆ ಹೋಗುತ್ತದೆ. ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಸೆಂಬರ್ 31 ರೊಳಗೆ ಪೂರ್ಣಗೊಳಿಸಬೇಕು.