alex Certify ಇದು BSY ಸರ್ಕಾರವಲ್ಲ; ವಿಜಯೇಂದ್ರ ಸರ್ಕಾರ: ಸಿಎಂ ಕುಟುಂಬದ ವಿರುದ್ಧ ಮತ್ತೆ ಗುಡುಗಿದ ಶಾಸಕ ಯತ್ನಾಳ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು BSY ಸರ್ಕಾರವಲ್ಲ; ವಿಜಯೇಂದ್ರ ಸರ್ಕಾರ: ಸಿಎಂ ಕುಟುಂಬದ ವಿರುದ್ಧ ಮತ್ತೆ ಗುಡುಗಿದ ಶಾಸಕ ಯತ್ನಾಳ್

ಬೆಂಗಳೂರು: ಸಚಿವ ಯೋಗೇಶ್ವರ್, ಬಿ.ವೈ. ವಿಜಯೇಂದ್ರ, ಕೊರೊನಾ ನಿರ್ವಹಣೆ ಬಗ್ಗೆ ಕಟುವಾಗಿ ಟೀಕಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬಿ.ವೈ. ವಿಜಯೇಂದ್ರ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಯಡಿಯೂರಪ್ಪನವರೇ ಸ್ವತಃ ದೆಹಲಿಗೆ ಹೋಗಬೇಕಿತ್ತು. ಆದರೆ ಅವರ ಪುತ್ರ ವಿಜಯೇಂದ್ರ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ. ಸರ್ಕಾರದಲ್ಲಿ ಅವರದ್ದೇನು ಕೆಲ್ಸ? ಇದು ಬಿ.ಎಸ್.ವೈ. ಸರ್ಕಾರವಲ್ಲ, ಬಿ.ವೈ. ವಿಜಯೇಂದ್ರ ಸರ್ಕಾರ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾಯಕತ್ವ ಬದಲಾವಣೆ, ಮೆಗಾ ಸಿಟಿ ಹಗರಣದಲ್ಲಿ ಸಿ.ಪಿ. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಯಡಿಯೂರಪ್ಪನವರಿಗಿಲ್ಲ. ಒಂದು ವೇಳೆ ಕ್ರಮ ಕೈಗೊಂಡರೆ ಕೇವಲ ಒಂದೇ ಗಂಟೆಯಲ್ಲಿ ರಾಜೀನಾಮೆ ಕೊಡಬೇಕಾಗುತ್ತೆ. ಇದು ಕೂಡ ರಮೇಶ್ ಜಾರಕಿಹೊಳಿ ಪ್ರಕರಣದಂತೆಯೇ ಆಗುತ್ತೆ. ಹಾಗಾಗಿ ಯೋಗೇಶ್ವರ್ ಅವರನ್ನು ವಜಾ ಮಾಡೋ ಪ್ರಶ್ನೆ ಬರಲ್ಲ. ಇನ್ನು ಜಿಂದಾಲ್ ಗೆ 3,666 ಎಕರೆ ಬರಿ 1 ಲಕ್ಷ 75 ಸಾವಿರಕ್ಕೆ ಹೇಗೆ ಕೊಟ್ಟರು? ಈ ಬಗ್ಗೆ ಹೈಕಮಾಂಡ್ ಪ್ರಶ್ನಿಸಿದೆ ಎಂದು ಹೇಳಿದರು.

ಕೊರೊನಾ ನಿರ್ವಹಣೆಯೂ ಕರ್ನಾಟಕದಲ್ಲಿ ಸಮರ್ಪಕವಾಗಿ ಆಗಿಲ್ಲ. ಎರಡು ಮೂರು ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಇದೆಲ್ಲವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಗುಡುಗಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...