ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾರತೀಯ ಮೂಲದ ಜೋಡಿಯ ಉಂಗುರವು ನದಿಯೊಂದರಲ್ಲಿ ಬಿದ್ದು ಕಳೆದುಹೋಗಿತ್ತು. ಉಂಗುರದ ಆಸೆಯನ್ನೇ ಬಿಟ್ಟಿದ್ದ ಜೋಡಿಗೆ ಅವರ ಉಂಗುರವನ್ನ ಹಿಂದಿರುಗಿಸಿಕೊಡುವಲ್ಲಿ ಖ್ಯಾತ ಈಜುಪಟು ಒಬ್ಬರು ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ನ ಅತೀ ದೊಡ್ಡ ನದಿಯೊಂದರಲ್ಲಿ ಈ ಘಟನೆ ಸಂಭವಿಸಿದೆ.
25 ವರ್ಷದ ವಿಕ್ಕಿ ಪಟೇಲ್ ಎಂಬವರು 26 ವರ್ಷದ ರೆಬೆಕ್ಕಾ ಚೌಕ್ರಿಯಾ ಎಂಬಾಕೆ ಪ್ರಪೋಸ್ ಮಾಡಿದ್ದರು. ಬರ್ಮಿಂಗ್ಹ್ಯಾಮ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಈ ಜೋಡಿ ವಿಂಡರ್ಮಿಯರ್ ನದಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಆಗಮಿಸಿತ್ತು.
ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ವೇಳೆಯಲ್ಲಿ ಚೌಕ್ರಿಯಾ ಕೈಲಿದ್ದ ನಿಶ್ಚಿತಾರ್ಥದ ಉಂಗುರ ನದಿಯಲ್ಲಿ ಜಾರಿ ಬಿದ್ದಿದೆ. ಈ ಉಂಗುರವನ್ನ ಪಡೆಯಲು ಜೋಡಿ ಇನ್ನಿಲ್ಲದ ಪ್ರಯತ್ನ ಮಾಡಿದೆ. ಆದರೆ ಯಾವುದೂ ಸಾಧ್ಯವಾಗಿಲ್ಲ. ಬಳಿಕ ಈ ಜೋಡಿಗೆ 21 ವರ್ಷದ ಡೈವರ್ ಸಹಾಯಕ್ಕೆ ಬಂದಿದ್ದು ನೀರಿನಲ್ಲಿ ಧುಮುಕಿ ಉಂಗುರವನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. 20 ನಿಮಿಷಗಳ ಹುಡುಕಾಟದ ಬಳಿಕ ಉಂಗುರವನ್ನ ಪತ್ತೆ ಮಾಡಿದ್ದಾರೆ. ಹಾಸ್ಕಿಂಗ್ ಸಮಯ ಪ್ರಜ್ಞೆಗೆ ಭಾರತೀಯ ಮೂಲದ ಜೋಡಿ ಧನ್ಯವಾದ ಅರ್ಪಿಸಿದೆ.