ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳನ್ನ ಪೊಲೀಸರು ಟ್ರೀಟ್ ಮಾಡೋ ವಿಧಾನವೇ ಬೇರೆ ರೀತಿ ಇರುತ್ತೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಈ ಕ್ರಿಮಿನಲ್ಗಳು ಕೈಗೆ ಸಿಕ್ಕರೆ ಸಾಕು ಪೊಲೀಸರು ಕೋಳ ತೊಡಿಸೋಕೆ ರೆಡಿಯಾಗಿ ಇರ್ತಾರೆ. ಆದರೆ ನ್ಯೂಜಿಲೆಂಡ್ನ ಪೊಲೀಸರು ಮಾತ್ರ ಕ್ರಿಮಿನಲ್ನ್ನು ಬಂಧಿಸೋಕೂ ಮುನ್ನ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.
ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬ ಪೊಲೀಸರ ಎದುರು ಶರಣಾಗೋಕೂ ಮುನ್ನ ಹೆಲಿಕಾಪ್ಟರ್ನಲ್ಲಿ ರೈಡ್ ಮಾಡಿ, ಬಗೆ ಬಗೆಯ ಮಾಂಸಾಹಾರ ಭಕ್ಷ್ಯವನ್ನ ಸವಿದು, ಶ್ಯಾಂಪೇನ್ ಕುಡಿದು ಎಂಜಾಯ್ ಮಾಡಿದ್ದಾನೆ.
ಆರೋಪಿ ಜೇಮ್ಸ್ ಮ್ಯಾಥ್ಯೂ ಬ್ರ್ಯಾಂಟ್ ಎಂಬಾತನ ವಿರುದ್ಧ ಹಾನಿಕಾರಕ ಡಿಜಿಟಲ್ ಸಂವಹನ, ಮಾರಕಾಸ್ತ್ರಗಳನ್ನ ಹೊಂದಿದ್ದು ಹಾಗೂ ಸರಿಯಾದ ಸಮಯಕ್ಕೆ ಕೋರ್ಟ್ ಎದುರು ಹಾಜರಾಗದ ಆರೋಪಗಳು ಇದ್ದವು. ಈತ ಮೂರು ವಾರಗಳ ಕಾಲ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದ ಈತ ದೇಶದ ದಕ್ಷಿಣ ದ್ವೀಪದಲ್ಲಿ ಅಲೆದಾಡುತ್ತಾ ಕಾಲ ಕಳೆಯುತ್ತಿದ್ದ. ಆದರೆ ಒಂದು ದಿನ ತಾನಿರುವ ಜಾಗವನ್ನ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಬ್ರ್ಯಾಂಟ್ಗೆ ತಿಳಿದುಬಂದಿದೆ.
ಆತ ಶರಣಾಗುವ ದಿನದಂದು, ಖಾಸಗಿ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡುವ ಮೂಲಕ ಎಂಜಾಯ್ ಮಾಡಿದ್ದಾನೆ. ಮಾತ್ರವಲ್ಲದೇ ಮಾಂಸಹಾರ ಹಾಗೂ ಶಾಂಪೇನ್ಗಳನ್ನ ಸವಿದಿದ್ದಾನೆ ಎಂದು ತಿಳಿದುಬಂದಿದೆ.