ಪುಣೆ: ಕೋವಿಶೀಲ್ಡ್ ಸಿಂಗಲ್ ಡೋಸ್ ಪರಿಣಾಮದ ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಕೊರೊನಾ ಸೋಂಕು ತಡೆಗೆ ನಿರೋಧಕ ಲಸಿಕೆಯಾಗಿರುವ ಕೋವಿಶೀಲ್ಡ್ ಮೊದಲ ಡೋಸ್ ಎಷ್ಟು ಪರಿಣಾಮಕಾರಿಯಾಗಬಹುದು ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ಕೈಗೊಳ್ಳಲು ಮುಂದಾಗಿದೆ.
ಕೇಂದ್ರ ಆರೋಗ್ಯ ಮಂತ್ರಾಲಯದ ರಾಷ್ಟ್ರೀಯ ನೈತಿಕ ಸಮಿತಿ ಅನುಮತಿ ನೀಡಿದ ಕೂಡಲೇ ಅಧ್ಯಯನ ಶುರುವಾಗಲಿದೆ. ಕೋವಿಶೀಲ್ಡ್ ಒಂದು ಡೋಸ್ ಎಷ್ಟು ಪರಿಣಾಮಕಾರಿ? ಎರಡು ಡೋಸ್ ಪಡೆದುಕೊಂಡರಲ್ಲಿ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಲ್ಲದೆ, ಮೊದಲ ಮತ್ತು ಎರಡನೇ ಡೋಸ್ ಗಳಲ್ಲಿ ಪ್ರತ್ಯೇಕ ಲಸಿಕೆ ನೀಡಿದರೆ ಯಾವ ಪರಿಣಾಮ ಬೀರುತ್ತದೆ ಎನ್ನುವ ಕುರಿತಾಗಿ ಅಧ್ಯಯನ ನಡೆಸಲಾಗುವುದು.
ಅಧ್ಯಯನದ ನಂತರ ಇದಕ್ಕೆ ತಕ್ಕಂತೆ ಲಸಿಕೆ ನೀತಿಯಲ್ಲಿ ಅಗತ್ಯವಾದ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಕೋವಿಶೀಲ್ಡ್ ಸಿಂಗಲ್ ಡೋಸ್ ಪರಿಣಾಮದ ಕುರಿತು ಅಧ್ಯಯನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.