ಜಿನೇವಾ: ಭಾರತದಲ್ಲಿ ಪತ್ತೆಯಾಗಿ ವಿಶ್ವದ 51 ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡ ರೂಪಾಂತರ ಕೊರೋನಾ ವೈರಸ್ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ.
ರೂಪಾಂತರ ತಳಿಗಳಿಗೆ ವೈಜ್ಞಾನಿಕ ಹೆಸರನ್ನು ರೂಪಾಂತರ ಕೊರೋನಾ ತಳಿಗಳಿಗೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಕಪ್ಪಾ ಮತ್ತು ಡೆಲ್ಟಾ ಎಂದು ಹೆಸರಿಸಿದೆ.
ಭಾರತದಲ್ಲಿ ಕೋವಿಡ್-19 ಸೋಂಕಿನ B.1.617.1 ಮತ್ತು B.1.617.2 ರೂಪಾಂತರ ತಳಿಗಳಿಗೆ ಕಪ್ಪಾ ಮತ್ತು ಡೆಲ್ಟಾ ಎಂದು ವಿಶ್ವ ಆರೋಗ್ಯ ಸಂಸ್ಥೆ ವೈಜ್ಞಾನಿಕ ಹೆಸರನ್ನು ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ನಾಮಕರಣ ಮಾಡಿದೆ.
ಕೊರೋನಾ ತಳಿ ಪತ್ತೆಯಾದ ದೇಶದ ಹೆಸರಿನೊಂದಿಗೆ ಕರೆಯದಂತೆ ಚರ್ಚೆಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಡಾ. ಮಾರಿಯಾ ವ್ಯಾನ್ ಕೆರ್ಕೋವಾ ಅವರು ಕೊರೋನಾ ರೂಪಾಂತರ ತಳಿಗಳಿಗೆ ನಾಮಕರಣ ಮಾಡಿದ ಬಗ್ಗೆ ಮಾಹಿತಿ ನೀಡಿದ್ದಾರೆ.