ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹರುಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ಸ್ಗಳ ಸಮಿತಿಯ(SLBC) ಆದೇಶದನ್ವಯ 2021ರ ಜೂನ್ 1 ರಿಂದ ಜೂನ್ 5 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳ ವ್ಯವಹಾರದ ವೇಳೆಯನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಗದಿಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಘ್ರಣೀಯ ಬ್ಯಾಂಕಿನ (ಲೀಡ್ ಬ್ಯಾಂಕ್) ವಿಭಾಗೀಯ ಪ್ರಬಂಧಕ ಮಧುಸೂದನ್ ಎಂ.ಸಿ. ತಿಳಿಸಿದ್ದಾರೆ.
ಬದಲಾಯಿಸಿದ ಈ ಬ್ಯಾಂಕ್ ವ್ಯವಹಾರದ ಸಮಯದಲ್ಲಿ ನಿಗದಿತ ಸೇವಾ ವ್ಯವಹಾರಗಳು ಮಾತ್ರ ನಡೆಯಲಿದ್ದು, ಬ್ಯಾಂಕ್ ಗ್ರಾಹಕರು ಈ ಬದಲಾದ ಸೇವಾ ಸಮಯವನ್ನು ಗಮನಿಸಿ ಬ್ಯಾಂಕಗಳೊಂದಿಗೆ ಸಹಕರಿಸಬೇಕೆಂದು ಎಂದು ತಿಳಿಸಿದ್ದಾರೆ.