ನವದೆಹಲಿ: ದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ಯೂರಿಯಾ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಸ್ವದೇಶಿ ರಸಗೊಬ್ಬರ ಕಂಪನಿಯಾಗಿರುವ ಇಫ್ಕೋ ದ್ರವರೂಪದ ಯೂರಿಯಾ ರಸಗೊಬ್ಬರವನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ತಯಾರಿಸಿದೆ.
ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವರೂಪದ ರಸಗೊಬ್ಬರ ಅರ್ಧ ಲೀಟರಿಗೆ 240 ರೂಪಾಯಿಯಾಗಿದ್ದು, ಒಂದು ಚೀಲ ಯೂರಿಯಾಕ್ಕೆ ಸಮನಾಗಿರುತ್ತದೆ. ಇದರಿಂದ ರೈತರಿಗೆ ಹಣ ಮತ್ತು ಶ್ರಮ ಉಳಿತಾಯವಾಗುತ್ತದೆ. ನೀರಿನಲ್ಲಿ ಮಿಶ್ರಣ ಮಾಡಿ ಇದನ್ನು ಬೆಳೆಗಳಿಗೆ ಸಿಂಪಡಿಸಬೇಕಿದೆ ಎಂದು ಹೇಳಲಾಗಿದೆ.