ಯಾವುದೇ ರೋಗದಿಂದ ಗುಣಮುಖರಾಗಲು ಲಸಿಕೆ ಮಾತ್ರ ಕೊನೆ ಪರಿಹಾರ. ಹಿಂದಿನ ಕಾಲದಿಂದಲೂ ಅನೇಕ ಖಾಯಿಲೆಗಳಿಗೆ ಲಸಿಕೆ ನೀಡುತ್ತ ಬರಲಾಗಿದೆ.
ಕೊರೊನಾಕ್ಕೂ ಲಸಿಕೆ ಮಾತ್ರ ಮದ್ದು. ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಲಸಿಕೆ ಪಡೆಯುವ ಅಗತ್ಯವಿದೆ. ಕೊರೊನಾ ಲಸಿಕೆ ಬಗ್ಗೆ ಈಗ್ಲೂ ಕೆಲವರಲ್ಲಿ ಭಯವಿದೆ. ಆದ್ರೆ ಯಾವ ಭಯವಿಲ್ಲದೆ, ವಿಳಂಬ ಮಾಡದೆ ಕೊರೊನಾ ಲಸಿಕೆ ಪಡೆಯುವ ಅಗತ್ಯವಿದೆ.
ಲಸಿಕೆ ಹಾಕದ ಜನರು ತಮಗಲ್ಲದೆ ತಮ್ಮವರಿಗೂ ಅಪಾಯಕಾರಿಯಾಗಿದ್ದಾರೆ. ಮನೆಯ ಅನೇಕ ಹಿರಿಯರಿಗೆ ಯುವಕರಿಂದ ಕೊರೊನಾ ಬರ್ತಿದೆ. ಲಸಿಕೆ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಚಿಕಿತ್ಸಾ ವೆಚ್ಚದ ಹೊರೆಯನ್ನೂ ಕಡಿಮೆ ಮಾಡ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ಕೊರೊನಾದ ಭೀಕರತೆ ಕಡಿಮೆ. ಎರಡೂ ಡೋಸ್ ಹಾಕಿಸಿಕೊಂಡವರಲ್ಲಿ ಐಸಿಯುವಿಗೆ ದಾಖಲಾಗುವಂತಹ ಲಕ್ಷಣ ಕಂಡು ಬಂದಿಲ್ಲ.
ಈ ಲಸಿಕೆ ಬೇರೆ ರೋಗದಿಂದಲೂ ನಮ್ಮ ದೇಹವನ್ನು ರಕ್ಷಿಸುತ್ತದೆ. ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ವೈರಸ್ ವಿರುದ್ಧ ಹೋರಾಡಲು ದೇಹವನ್ನು ಬಲಗೊಳಿಸುತ್ತದೆ. ಕೊರೊನಾ ಲಸಿಕೆಯನ್ನು ದೇಶದ ಪ್ರತಿಯೊಬ್ಬರೂ ಪಡೆಯುವ ಅಗತ್ಯವಿದೆ. ಹಾಗೆ ಬೇರೆಯವರಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸಬೇಕಿದೆ.