ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಲಸಿಕೆಗೆ ಆದ್ಯತೆ ನೀಡ್ತಿದ್ದಾರೆ. ಕೊರೊನಾ ಲಸಿಕೆ ಪಡೆಯಲು ಜನರು ಸ್ಲಾಟ್ ಹುಡುಕುತ್ತಿದ್ದಾರೆ. ಅಲ್ಲಿ ಇಲ್ಲಿ ಸ್ಲಾಟ್ ಹುಡುಕುವ ಅಗತ್ಯವಿಲ್ಲ. ಪೇಟಿಎಂ ಮೂಲಕ ಹತ್ತಿರದಲ್ಲಿರುವ ಲಸಿಕಾ ಕೇಂದ್ರವನ್ನು ಪತ್ತೆ ಮಾಡಬಹುದು.
ಪೇಟಿಎಂಗೆ ಹೋಗಿ ಅಲ್ಲಿ ವ್ಯಾಕ್ಸಿನೇಷನ್ ಫೈಂಡರ್ ಸೆಕ್ಷನ್ ಆಯ್ಕೆ ಮಾಡಬೇಕು. ಆದ್ರೆ ಇದ್ರಲ್ಲಿ ಸ್ಲಾಟ್ ಬುಕ್ ಮಾಡಲು ಸಾಧ್ಯವಿಲ್ಲ. ಇಲ್ಲಿ ವ್ಯಾಕ್ಸಿನ್ ಸ್ಲಾಟ್ ಸ್ಥಿತಿಯನ್ನು ಮಾತ್ರ ಪತ್ತೆ ಮಾಡಬಹುದು. ಈ ವೈಶಿಷ್ಟ್ಯದಲ್ಲಿ ಯಾವ ಕೇಂದ್ರದಲ್ಲಿ ಯಾವ ಲಸಿಕೆ ಸಿಗುತ್ತಿದೆ ಎಂಬುದನ್ನು ತಿಳಿಯಬಹುದು. ವಯಸ್ಸಿನ ವರ್ಗಕ್ಕೆ ಅನುಗುಣವಾಗಿ ಲಸಿಕೆ ಸ್ಥಿತಿಯನ್ನು ಹುಡುಕಬಹುದು. ಪೇಟಿಎಂ ಮುಖಪುಟದ ಕೆಳಭಾಗದಲ್ಲಿ ವ್ಯಾಕ್ಸಿನೇಷನ್ ಫೈಂಡರ್ ಸೆಕ್ಷನ್ ಕಾಣಬಹುದು.
ಜಿಲ್ಲೆ, ಪಿನ್ ಕೋಡ್ ಹಾಕಿ, ಸುತ್ತಮುತ್ತಲು ಯಾವ ಕೇಂದ್ರವಿದೆ ಎಂಬುದನ್ನು ಪತ್ತೆ ಮಾಡಬಹುದು. ವಯಸ್ಸಿನ ಮಾಹಿತಿಯನ್ನೂ ಇಲ್ಲಿ ತೋರಿಸಲಾಗುತ್ತದೆ. ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಇದ್ರ ಆಯ್ಕೆಯನ್ನೂ ನೀವು ಮಾಡಬಹುದು. ಇಲ್ಲಿ ಯಾವ ಸ್ಲಾಟ್ ಖಾಲಿಯಿದೆ ಎಂಬ ಮಾಹಿತಿಯನ್ನೂ ನೀಡಲಾಗುತ್ತದೆ. ಖಾಲಿಯಿಲ್ಲವೆಂದಾದ್ರೆ ಖಾಲಿಯಾದಾಗ ನೋಟಿಫಿಕೇಷನ್ ಬರುತ್ತದೆ.