
ಮದುವೆ ಇಬ್ಬರ ಮಧ್ಯೆ ಅಲ್ಲ ಎರಡು ಕುಟುಂಬಗಳ ಮಧ್ಯೆ ನಡೆಯುವಂತಹದ್ದು. ಮದುವೆಗೂ ಮುನ್ನ ಹುಡುಗ ಅಥವಾ ಹುಡುಗಿ ಕೆಲವೊಂದು ಷರತ್ತು ವಿಧಿಸುವುದುಂಟು. ಇತ್ತೀಚಿನ ದಿನಗಳಲ್ಲಿ ವರನಿಗಿಂತ ವಧು ಹೆಚ್ಚು ಬೇಡಿಕೆಯಿಡ್ತಿದ್ದಾಳೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹುಡುಗನ ತಾಯಿಯೊಬ್ಬಳ ಷರತ್ತುಗಳು ವೈರಲ್ ಆಗಿವೆ.
ಟಿಕ್ ಟಾಕ್ ಬಳಕೆದಾರ ಎಮ್ಮಾ, ತಮ್ಮ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾಳೆ. ಎಮ್ಮಾ ಗೆಳೆಯನ ತಾಯಿಯ ಷರತ್ತಿನ ಫೋಟೋ ಹಂಚಿಕೊಂಡಿದ್ದಾಳೆ. ಇದ್ರಲ್ಲಿ ಚಿತ್ರವಿಚಿತ್ರ ಷರತ್ತುಗಳಿವೆ. ತನ್ನ ಮಗನೊಂದಿಗೆ ಬದುಕಬೇಕಾದ್ರೆ ಕೆಲವೊಂದು ನಿಯಮದಂತೆ ಬದುಕಬೇಕು. ಇಲ್ಲವಾದಲ್ಲಿ ನಮ್ಮ ಮನೆಯಲ್ಲಿ ಜಾಗವಿಲ್ಲವೆಂದು ಬರೆದಿದ್ದಾಳೆ.
ಮಗನನ್ನು ಎಟಿಎಂನಂತೆ ನೋಡಬಾರದು. ಮನೆಯಲ್ಲಿ ಕೆಟ್ಟ ಬಟ್ಟೆ ಧರಿಸಬಾರದು. ಮೊಬೈಲ್ ನಲ್ಲಿ ಅಶ್ಲೀಲ ಮೆಸ್ಸೇಜ್ ಇರಬಾರದು. ನನಗೆ ನೀನಿಷ್ಟವಾಗಿಲ್ಲವೆಂದ್ರೆ ನಮ್ಮ ಮನೆಯಲ್ಲಿ ನಿನಗೆ ಜಾಗವಿಲ್ಲ. ಹೀಗೆ ಅನೇಕ ಷರತ್ತುಗಳನ್ನು ವಿಧಿಸಿದ್ದಾಳೆ. ಪೊಲೀಸರಿಂದ ರಕ್ಷಣೆ ಪಡೆಯುವುದು ಹೇಗೆ ಎಂಬ ಬಗೆಯೂ ನನಗೆ ಗೊತ್ತು ಎಂದು ಷರತ್ತು ವಿಧಿಸಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಈ ತಾಯಿ ಹೇಳಿದಂತೆ ಬದುಕಲು ಸಾಧ್ಯವಿಲ್ಲವೆಂದು ಅನೇಕರು ಕಮೆಂಟ್ ಮಾಡಿದ್ದಾರೆ.