ಬಾಲಿವುಡ್ ಅಂಗಳದಲ್ಲಿ 19 ವರ್ಷಗಳ ಪಯಣ ಮೆಲಕು ಹಾಕಿದ ಸೂನು ಸೂದ್ 31-05-2021 1:48PM IST / No Comments / Posted In: Featured News, Live News, Entertainment ಬಾಲಿವುಡ್ ನಟ ಸೋನು ಸೂದ್ ಸದ್ಯ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಇಂದಿಗೆ ಸೋನು ಸೂದ್ ಬಾಲಿವುಡ್ ಅಂಗಳಕ್ಕೆ ಪಾದರ್ಪಣೆ ಮಾಡಿ 19 ವರ್ಷ ಪೂರ್ಣಗೊಂಡಿದೆ. 2002ರಲ್ಲಿ ಸುಕುಮಾರ್ ನಾಯರ್ರ ಶಹೀದ್ ಅಜಮ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಬಾಲಿವುಡ್ನಲ್ಲಿ ತಮ್ಮ ಪಯಣವನ್ನ ಜ್ಞಾಪಿಸಿಕೊಂಡ ಸೂನು ಸೂದ್ ಟ್ವಿಟರ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ವ್ಹಾವ್..! ಸಮಯ ಎಷ್ಟು ಬೇಗ ಸಂಚರಿಸುತ್ತದೆ. ಇದು ಎಂದಿಗೂ ನನ್ನ ಪಾಲಿಗೆ ವಿಶೇಷ ಸಿನಿಮಾ ಆಗಿರಲಿದೆ ಎಂದು ಟ್ವಿಟರ್ನಲ್ಲಿ ತಮ್ಮ ಶಹೀದ್ ಅಜಮ್ ಸಿನಿಮಾದ ದಿನಗಳನ್ನ ಜ್ಞಾಪಿಸಿಕೊಂಡಿದ್ದಾರೆ. ಕೋವಿಡ್ 19 ದೇಶಕ್ಕೆ ಬಂದಪ್ಪಳಿಸಿದಾಗಿನಿಂದ ಸೋನು ಸೂದ್ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮೊದಲ ಅಲೆಯಲ್ಲಿ ವಲಸೆ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದ ಸೋನು ಸೂದ್ ಈಗ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಮಾಡುವ ಮೂಲಕ ದೇಶದ ಜನತೆಯ ಮನಸ್ಸನ್ನ ಪದೇ ಪದೇ ಗೆಲ್ಲುತ್ತಿದ್ದಾರೆ.