ಪತಿ, ಪತ್ನಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದು, 1972 ರ ಕೇಂದ್ರ ನಾಗರಿಕ ಸೇವೆಗಳ ನಿಯಮದ ವ್ಯಾಪ್ತಿಗೆ ಒಳಪಟ್ಟಿದ್ದರೆ, ಅವರ ಮರಣದ ನಂತ್ರ ಮಕ್ಕಳಿಗೆ ಎರಡು ಕುಟುಂಬದ ಪಿಂಚಣಿ ಸಿಗಲಿದೆ. ಇದ್ರ ಗರಿಷ್ಠ ಮಿತಿ 1.25 ಲಕ್ಷ ರೂಪಾಯಿ. ಆದ್ರೆ ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರ ಕೆಲವೊಂದು ನಿಯಮಗಳನ್ನು ವಿಧಿಸುತ್ತದೆ.
ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಕೇಂದ್ರ ನಾಗರಿಕ ಸೇವೆಗಳ ನಿಯಮ 54 ರ ಉಪ ನಿಯಮ 11 ರ ಪ್ರಕಾರ, ಪತಿ – ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಮತ್ತು ಆ ನಿಯಮಕ್ಕೆ ಒಳಪಟ್ಟರೆ ಅವರು ಮರಣಹೊಂದಿದ ನಂತ್ರ ಅವರ ಮಕ್ಕಳು ಇಬ್ಬರೂ ಪೋಷಕರ ಪಿಂಚಣಿಗೆ ಅರ್ಹರಾಗಿರುತ್ತಾರೆ. ನಿಯಮಗಳ ಪ್ರಕಾರ, ಒಬ್ಬ ಪೋಷಕರು ಸೇವೆಯ ಸಮಯದಲ್ಲಿ ಅಥವಾ ನಿವೃತ್ತಿಯ ನಂತರ ಸಾವನ್ನಪ್ಪಿದ್ರೆ ಇನ್ನೊಬ್ಬರಿಗೆ ಪಿಂಚಣಿ ನೀಡಲಾಗುತ್ತದೆ. ಇಬ್ಬರ ಮರಣದ ನಂತರ, ಅವರ ಮಕ್ಕಳಿಗೆ ಇಬ್ಬರ ಪಿಂಚಣಿ ಸಿಗಲಿದೆ.
ಈ ಮೊದಲು ಎರಡೂ ಪಿಂಚಣಿದಾರರು ಸಾವನ್ನಪ್ಪಿದರೆ 54 ಉಪ ನಿಯಮ (3) ರ ಪ್ರಕಾರ ಮಕ್ಕಳಿಗೆ ಎರಡು ಪಿಂಚಣಿಗಳ ಮಿತಿ 45,000 ರೂಪಾಯಿಯಾಗಿತ್ತು. 7 ನೇ ವೇತನ ಆಯೋಗದ ನಂತರ ಮಕ್ಕಳು ಪಡೆದ ಪಿಂಚಣಿಯಲ್ಲೂ ಬದಲಾವಣೆ ಕಂಡುಬಂದಿದೆ. ತಿಂಗಳಿಗ 1.5 ಲಕ್ಷ ರೂಪಾಯಿ ಪಿಂಚಣಿ ಸಿಗಲಿದೆ.