ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ವಿಡಿಯೋ 31-05-2021 3:32PM IST / No Comments / Posted In: Latest News, International ತನ್ನ ಹೊಟ್ಟೆಯನ್ನು ಇಚ್ಛೆಯನುಸಾರ ಒಳಮುಖವಾಗಿ ಎಳೆದುಕೊಳ್ಳಬಲ್ಲ ಸಾಮರ್ಥ್ಯವನ್ನು ತೋರಿದ ಯುವತಿಯೊಬ್ಬರು ನೆಟ್ಟಿಗರನ್ನು ಚಕಿತಗೊಳಿಸಿದ್ದಾರೆ. ಸೂಪರ್ಮಾರ್ಕೆಟ್ ಒಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಈ ಮಹಿಳೆ ತನ್ನ ಹೊಟ್ಟೆಯೇ ಇಲ್ಲವೇನೋ ಎಂಬ ಮಟ್ಟಿಗೆ ಹಿಂದಕ್ಕೆ ಎಳೆದುಕೊಳ್ಳುವುದನ್ನು ನೋಡಬಹುದಾಗಿದೆ. “ಆಕೆ ತಿಂದ್ದದ್ದೆಲ್ಲಾ ಎಲ್ಲಿಗೋಯ್ತು?” ಎಂದು ಕ್ಯಾಪ್ಷನ್ ಹಾಕಿ ರೆಡ್ಡಿಟ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ಕ್ಲಿಪ್ಗೆ ಇದುವರೆಗೂ 40,500 ಅಪ್ವೋಟ್ಗಳು ಸಿಕ್ಕಿದ್ದು, ಸಹಸ್ರಾರು ಕಾಮೆಂಟ್ಗಳು ಬಂದಿವೆ. Where did all the stuff go? byu/cenotaphx inblackmagicfuckery