alex Certify ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಈ ದೇಶದಲ್ಲಿದೆ ʼಬಂಪರ್‌ʼ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಈ ದೇಶದಲ್ಲಿದೆ ʼಬಂಪರ್‌ʼ ಅವಕಾಶ

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್‌ ಸಾಂಕ್ರಮಿಕಕ್ಕೆ ಕಡಿವಾಣ ಹಾಕಲು ಸಾರ್ವಜನಿಕರಲ್ಲಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಣೆ ನೀಡಲು ಮುಂದಾದ ಹಾಂಕಾಂಗ್‌ ಡೆವಲಪರ್‌ಗಳು ಕೋವಿಡ್‌-19 ಲಸಿಕೆ ಹಾಕಿಸಿಕೊಂಡವರಲ್ಲಿ ಅದೃಷ್ಟಶಾಲಿಗಳಿಗೆ $1.4 ದಶಲಕ್ಷ ಮೌಲ್ಯದ ಫ್ಲಾಟ್‌ ಅನ್ನು ಬಂಪರ್‌‌ ಬಹುಮಾನವಾಗಿ ಗೆಲ್ಲುವ ಸಾಧ್ಯತೆ ತೆರೆದಿಟ್ಟಿದೆ.

ಸಿನೋ ಸಮೂಹದ ಎಂಗ್ ಟೆಂಗ್ ಫಾಂಗ್ ಚಾರಿಟಬಲ್ ಪ್ರತಿಷ್ಠಾನ ಹಾಗೂ ಚೈನೀಸ್ ಎಸ್ಟೇಟ್ಸ್‌ ಹೋಲ್ಡಿಂಗ್ಸ್‌ ಸಮೂಹಗಳು ಇಲ್ಲಿನ ಕ್ವೂನ್ ಟೌನ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಗ್ರಾಂಡ್ ಸೆಂಟ್ರಲ್ ಪ್ರಾಜೆಕ್ಟ್‌ನಲ್ಲಿ 449 ಚದರ ಅಡಿ (42 ಚದರ-ಮೀಟರ್‌) ವಿಸ್ತಾರದ ಅಪಾರ್ಟ್‌‌ಮೆಂಟ್‌ ಅನ್ನು ಕೋವಿಡ್ ಲಸಿಕೆ ಹಾಕಿಸಿಕೊಂಡ ನಾಗರಿಕರಿಗೆ ಬಂಪರ್‌ ರೂಪದಲ್ಲಿ ನೀಡುವುದಾಗಿ ಘೋಷಿಸಿವೆ.

ಇದರಲ್ಲಿ ಕೆಲವೊಂದು ಷರತ್ತುಗಳಿದ್ದು; ಈ ಬಂಪರ್‌ನ ಡ್ರಾನಲ್ಲಿ ಭಾಗಿಯಾಗಬೇಕೆಂದರೆ ನೀವು ಹಾಂಕಾಂಗ್‌ನ ಪ್ರಜೆಯಾಗಿದ್ದು, ಕೋವಿಡ್‌ ಲಸಿಕೆಯ ಎರಡೂ ಶಾಟ್‌ಗಳನ್ನು ಪಡೆದಿರಬೇಕಾಗುತ್ತದೆ.

ತನ್ನ ಜನಸಂಖ್ಯೆಯಷ್ಟಕ್ಕೂ ಲಸಿಕೆಗಳನ್ನು ನೀಡಲು ಬೇಕಾದಷ್ಟು ಡೋಸ್‌ಗಳನ್ನು ಕ್ರೋಢೀಕರಿಸಿಕೊಂಡಿರುವ ಹಾಂಕಾಂಗ್‌, 7.5 ದಶಲಕ್ಷ ಜನರಿಗೆ ಲಸಿಕೆ ಹಾಕಲು ಸಜ್ಜಾಗಿದೆ. ವೈರಸ್‌-ಮುಕ್ತವಾದ ಈ ನಗರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಧಾವಂತವಿಲ್ಲದಿರುವುದು ಹಾಗೂ ಸರ್ಕಾರದ ಮೇಲೆ ಅಪನಂಬಿಕೆ ಹೆಚ್ಚಾಗಿರುವ ಕಾರಣ ಲಸಿಕಾ ಕಾರ್ಯಕ್ರಮಕ್ಕೆ ಸವಾಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...