ತನ್ನ ಬೇಡಿಕೆಗಳ ಪಟ್ಟಿಯನ್ನು ಈಡೇರಿಸಲು ಆಗಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಮಗನಿಗೆ ಗಾಡ್ಫಾದರ್ ಆಗಲು ನಿರಾಕರಿಸಿ ಸ್ವಾರ್ಥಿ ಎನಿಸಿಕೊಂಡಿದ್ದಾನೆ.
ರೆಡ್ಡಿಟ್ ಪೋಸ್ಟ್ ಒಂದರಲ್ಲಿ ತನ್ನ ಹೆಸರು ಹೇಳಲಿಚ್ಛಿಸದ ಈ ವ್ಯಕ್ತಿ ಈ ವಿಚಾರವನ್ನು ಹೇಳಿಕೊಂಡಿದ್ದು; ತಾನು ಹಾಗೂ ತನ್ನ ಮಡದಿ ದಂಪತಿಗಳ ಜೋಡಿಯೊಂದನ್ನು ಒಂಬತ್ತು ವರ್ಷಗಳ ಹಿಂದೆ ಭೇಟಿ ಮಾಡಿದ್ದು ಪರಸ್ಪರ ಗಾಢ ಬಾಂಧವ್ಯ ಬೆಳೆದಿದ್ದಾಗಿ ತಿಳಿಸಿದ್ದಾನೆ.
ತಮ್ಮ ಮಗುವಿಗೆ ಗಾಡ್ಫಾದರ್ ಆಗುವ ಆಫರ್ ಕೊಟ್ಟ ವೇಳೆ ಆತ ಅದನ್ನು ಒಪ್ಪಿಕೊಳ್ಳಲು ಥ್ರಿಲ್ ಆಗಿದ್ದಾನೆ. ಆದರೆ ಇದಾದ ಬಳಿಕ ತನ್ನ ಮುಂದೆ ಬಂದ ಕಾನೂನಾತ್ಮಕವಾದ ಕಾಂಟ್ರಾಕ್ಟ್ ಒಂದು ’ಅಸಹನೀಯ’ ಬೇಡಿಕೆಗಳ ಪಟ್ಟಿಯನ್ನೇ ಹೊಂದಿದ್ದ ಕಾರಣ ಅದನ್ನು ಅರಿತು ಶಾಕ್ ಆಗಿದ್ದಾನೆ. ಈ ಕಾಂಟ್ರಾಕ್ಟ್ನಲ್ಲಿದ್ದ ಕ್ಲಾಸ್ ಒಂದು, ಆ ವ್ಯಕ್ತಿ ಕ್ಯಾಥೋಲಿಕ್ ಆಗಿ ಮಗುವಿಗೆ 18 ಲಕ್ಷ ರೂ.ಗಳಷ್ಟು ಮೌಲ್ಯದ ಉಡುಗೊರೆ ಕೊಡಬೇಕೆಂದು ಇತ್ತು.
ಮಗುವಿನ ವಿದ್ಯಾಭ್ಯಾಸಕ್ಕೆಂದು ಪ್ರತ್ಯೇಕವಾಗಿ $25,000 (18 ಲಕ್ಷ ರೂ.) ತೆಗೆದಿರಿಸಬೇಕೆಂದು ಕಾಂಟ್ರಾಕ್ಟ್ನಲ್ಲಿ ತಿಳಿಸಿದ್ದಲ್ಲದೇ, ಆ ಮಗುವಿನ ತಂದೆ-ತಾಯಿ ಏನಾದರೂ ಪ್ರವಾಸಕ್ಕೆ ಹೋದಲ್ಲಿ ಮಗುವಿನ ಹೊಣೆಯನ್ನು ತಾನೇ ಹೊರಬೇಕೆಂದು ಸಹ ಬರೆಯಲಾಗಿತ್ತು.
ಇಂಥ ನಾಚಿಗೇಡಿನ ಬೇಡಿಕೆಗಳ ಮೂಲಕ ಸ್ನೇಹಸಂಬಂಧಕ್ಕೆ ತಿಲಾಂಜಲಿ ಹಾಡಿದ ತನ್ನ ಮಿತ್ರನಿಗೆ ಗುಡ್ಬೈ ಹೇಳಿದ ಈ ವ್ಯಕ್ತಿ, ಕಾಂಟ್ರಾಕ್ಟ್ನ ಪತ್ರಗಳನ್ನು ಹರಿದು ತನ್ನ ಸ್ನೇಹಿತನಿಗೆ ಮೇಲ್ಬಾಕ್ಸ್ನಲ್ಲಿ ಕಳುಹಿಸಿದ್ದಾನೆ.