ನವದೆಹಲಿ: ಕೇರಳಕ್ಕೆ ಜೂನ್ 3 ರ ವೇಳೆಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಮುಂಗಾರು ಮಾರುತಗಳು ಎರಡು ದಿನ ವಿಳಂಬವಾಗಿ ಕೇರಳ ಪ್ರವೇಶಿಸಲಿವೆ. ಜೂನ್ 3ರ ವೇಳೆಗೆ ಕೇರಳ ಪ್ರವೇಶಿಸುವ ಮುಂಗಾರು ಮಾರುತಗಳು ನಂತರ ರಾಜ್ಯಕ್ಕೆ ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸದ್ಯ ಜೋರಾದ ಗಾಳಿಯ ಚಲನೆ ಇದೆ. ಇದರಿಂದಾಗಿ ನೈರುತ್ಯ ಮಾರುತಗಳ ಪ್ರವೇಶ ವಿಳಂಬವಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಎಂ. ಮೊಹಾಪಾತ್ರ ತಿಳಿಸಿದ್ದಾರೆ. ಜೂನ್ 1 ರಿಂದ ನೈರುತ್ಯ ಮಾರುತಗಳು ವೇಗ ಪಡೆದುಕೊಳ್ಳಲಿದ್ದು, ಜೂನ್ 3 ರ ವೇಳೆಗೆ ಕೇರಳದಲ್ಲಿ ಮಳೆಯಾಗಲಿದೆ.