alex Certify ಮದುವೆ ಮನೆಯನ್ನು ಸ್ಮಶಾನ ಮಾಡಿದ ಮಾರ್ಟಾರ್‌ ಶೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯನ್ನು ಸ್ಮಶಾನ ಮಾಡಿದ ಮಾರ್ಟಾರ್‌ ಶೆಲ್

ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಮಾರ್ಟಾರ್‌ ಶೆಲ್ ಅಪ್ಪಳಿಸಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ಅಫ್ಘಾನಿಸ್ತಾನದ ಉತ್ತರದಲ್ಲಿರುವ ಕಪಿಸಾ ಪ್ರಾಂತ್ಯದಲ್ಲಿ ನಡೆದಿದೆ.

ಇಲ್ಲಿನ ತಗಬ್ ಜಿಲ್ಲೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಈ ಜಾಗದಲ್ಲಿ ಅಫ್ಘನ್ ಸರ್ಕಾರ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಘರ್ಷಣೆ ಜೋರಾಗಿದೆ. ಈ ಮಾರ್ಟಾರ್‌ ಫೈರಿಂಗ್ ಸಂಬಂಧ ತಾಲಿಬಾನ್ ಹಾಗೂ ಅಫ್ಘನ್ ಭದ್ರತಾ ಪಡೆಗಳು ಪರಸ್ಪರ ಕೆಸರೆರಚಾಟ ಮಾಡುತ್ತಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ 11ರಂದು ಅಮೆರಿಕನ್ ತುಕಡಿಗಳನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ವಾಷಿಂಗ್ಟನ್ ಘೋಷಿಸಿದ ಬಳಿಕ ಈ ದೇಶದಲ್ಲಿ ಹಿಂಸಾಚಾರ ವಿಪರೀತ ಎನ್ನುವ ಮಟ್ಟಕ್ಕೆ ಹೆಚ್ಚಾಗಿದೆ.

ಅಫ್ಘನ್ ಪಡೆಗಳು ಹಾಗೂ ತಾಲಿಬಾನ್ ಬಂಡುಕೋರರ ನಡುವಿನ ಘರ್ಷಣೆಯಲ್ಲಿ 2021ರ ಮೊದಲ ಮೂರು ತಿಂಗಳಲ್ಲಿ 1,800 ಅಫ್ಘನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ವಿಶ್ವ ಸಂಸ್ಥೆ ಕಳೆದ ತಿಂಗಳು ತಿಳಿಸಿತ್ತು.

2020ರಲ್ಲಿ ಈ ಘರ್ಷಣೆಯಿಂದಾಗಿ 8500 ನಾಗರಿಕರಿಗೆ ಗಾಯಗಳಾಗಿದ್ದು, ಇವರಲ್ಲಿ 2,958 ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ವಾರ್ಷಿಕ ವರದಿಯಲ್ಲಿ ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...