alex Certify ಖುಷಿ ಸುದ್ದಿ: EPFO – ಇಎಸ್‌ಐಸಿ ಅಡಿ ಕೇಂದ್ರದಿಂದ ಮತ್ತಷ್ಟು ಕೊಡುಗೆಗಳ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ: EPFO – ಇಎಸ್‌ಐಸಿ ಅಡಿ ಕೇಂದ್ರದಿಂದ ಮತ್ತಷ್ಟು ಕೊಡುಗೆಗಳ ಘೋಷಣೆ

ಇಪಿಎಫ್‌ಓ ಹಾಗೂ ಇಎಸ್‌ಐಸಿ ಮುಖಾಂತರ ಚಾಲ್ತಿಯಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಕಾರ್ಮಿಕ ಹಾಗೂ ನೌಕರಿ ಸಚಿವಾಲಯ ಹೊಸ ಲಾಭಗಳನ್ನು ಘೋಷಣೆ ಮಾಡಿವೆ.

ಕಾರ್ಮಿಕರ ರಾಜ್ಯ ವಿಮಾ ಸಂಸ್ಥೆ (ಇಎಸ್‌ಐಸಿ) ವಿಮೆಗೆ ಒಳಪಟ್ಟ ವ್ಯಕ್ತಿಗಳು ಕೋವಿಡ್‌-19ನಿಂದ ಮೃತಪಟ್ಟಲ್ಲಿ ಅವಲಂಬಿತರು ಪಿಂಚಣಿ ಪಡೆಯಬಹುದಾಗಿದೆ. ಅಲ್ಲದೇ, ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ನಡೆಸುವ ಕಾರ್ಮಿಕರ ಠೇವಣಿ ಸಂಬಂಧಿತ ವಿಮಾ ಯೋಜನೆ (ಇಡಿಎಲ್‌ಐ) ಅಡಿ ಖಾತ್ರಿ ಮಾಡಲಾಗುವ ಸಾಮೂಹಿಕ ವಿಮಾ ಯೋಜನೆಯಲ್ಲಿ ಸಿಗುವ ನೆರವನ್ನು 6 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.

“ಕಾರ್ಮಿಕರಿಗೆ ತಮ್ಮ ಕುಟುಂಬಗಳ ಸದಸ್ಯರ ಆರೋಗ್ಯ ಹಾಗೂ ನೆಮ್ಮದಿಯನ್ನು ಖಾತ್ರಿ ಪಡಿಸಲೆಂದು, ಕೋವಿಡ್-19 ಸೋಂಕಿನಿಂದ ಮೃತಪಟ್ಟ ಘಟನೆಗಳು ಸಂಭವಿಸಿದರೆ, ಅಂಥವರಿಗೆ ಇಎಸ್‌ಐಸಿ ಹಾಗೂ ಇಪಿಎಫ್‌ಓ ಮುಖಾಂತರ ಹೆಚ್ಚುವರಿ ಪ್ರಯೋಜನಗಳನ್ನು ಕಾರ್ಮಿಕ ಹಾಗೂ ನೌಕರಿ ಸಚಿವಾಲಯದಿಂದ ಘೋಷಿಸಲಾಗಿದೆ” ಎಂದು ಸಚಿವಾಲಯದ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಸದ್ಯದ ಮಟ್ಟಿಗೆ ಇಎಸ್‌ಐಸಿ ಅಡಿ ವಿಮೆಗೆ ಒಳಪಟ್ಟ ವ್ಯಕ್ತಿಗಳು ಉದ್ಯೋಗ ಸಂಬಂಧಿ ಗಾಯದಿಂದ ಮೃತಪಟ್ಟರೆ, ಅವರ ದಿನನಿತ್ಯದ ವೇತನದ 90 ಪ್ರತಿಶತದಷ್ಟು ಅವರ ಸಂಗಾತಿ ಅಥವಾ ವಿಧವೆ ತಾಯಿಗೆ ಜೀವನಪರ್ಯಂತ ಹಾಗೂ ಮಕ್ಕಳಿಗೆ 25 ವರ್ಷ ವಯಸ್ಸಾಗುವವರೆಗೂ ದೊರಕಲಿದೆ. ಹೆಣ್ಣುಮಗುವಿದ್ದಲ್ಲಿ, ಅವರ ಮದುವೆಯಾಗುವವರೆಗೂ ಈ ಲಾಭ ದೊರಕಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...