alex Certify ಲೈವ್​ನಲ್ಲಿ ಇದ್ದಾಗಲೇ ಪತ್ರಕರ್ತನ ಮೈಮೇಲೆ ಹರಿದ ಹುಳ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್​ನಲ್ಲಿ ಇದ್ದಾಗಲೇ ಪತ್ರಕರ್ತನ ಮೈಮೇಲೆ ಹರಿದ ಹುಳ..! ವೈರಲ್​ ಆಯ್ತು ವಿಡಿಯೋ

ಪತ್ರಕರ್ತರು ಅಂದರೆ ಸಾಕು ಯಾವುದಾದರೊಂದು ಗಂಭೀರ ವಿಚಾರದ ಬಗ್ಗೆ ಮಾತನಾಡುವ ದೃಶ್ಯವೇ ಕಣ್ಮುಂದೆ ಬಂದು ಬಿಡುತ್ತೆ. ಆದರೆ ನೇರ ಸಂದರ್ಶನದಲ್ಲಿ ಇದ್ದಾಗಲೇ ಸಾಕಷ್ಟು ಫನ್ನಿ ಮೂಮೆಂಟ್​ಗಳು ನಡೆದುಬಿಡುತ್ತವೆ. ಇಂತಹ ಸಾಕಷ್ಟು ದೃಶ್ಯಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಾನೇ ಇರುತ್ವೆ.

ಇದೀಗ ಇಂತದ್ದೇ ಇನ್ನೊಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಸಿಎನ್​ಎನ್​ ಚಾನೆಲ್​ನ ವರದಿಗಾರ ಮನು ರಾಜು ಎಂಬವರು ವಾಷಿಂಗ್ಟನ್​ ಡಿಸಿಯಿಂದ ಲೈವ್​ಗೆ ಬಂದಿದ್ದರು. ಈ ವೇಳೆ ಅವರ ಹೆಗಲ ಮೇಲೆ ಹುಳವೊಂದು ಓಡಾಡಿದೆ. ಅದು ಕಾಲರ್​ನಿಂದ ಕುತ್ತಿಗೆ ತುಂಬೆಲ್ಲ ಓಡಾಡಿದೆ.

ಹುಳ ಲೈವ್​ನಲ್ಲೇ ಈ ರೀತಿ ಹರಿದಾಡುತ್ತಿದ್ದರೂ ಸಹ ರಾಜುಗೆ ಇದರ ಬಗ್ಗೆ ಲಕ್ಷ್ಯವಿರಲಿಲ್ಲ. ಹುಳ ತನ್ನ ಮೈಮೇಲೆ ಹರಿದಾಡ್ತಾ ಇರೋದ್ರ ಬಗ್ಗೆ ತಿಳೀತಾ ಇದ್ದಂತೆ ಅವರು ಕಿರುಚುತ್ತಾ ಶರ್ಟ್ ಕೊಡವಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಸ್ವತಃ ಮನು ರಾಜು ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

— Manu Raju (@mkraju) May 27, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...