ಕೊರೊನಾ ವೈರಸ್ ಎರಡನೇ ಅಲೆಯಿಂದಾಗಿ ಐಪಿಎಲ್ 2021ರ ಪಂದ್ಯಗಳನ್ನು ಮುಂದೂಡಲಾಗಿದೆ. ಹಾಗಾಗಿ ಎಲ್ಲ ಆಟಗಾರರು ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಧೋನಿ ಪತ್ನಿ ಸಾಕ್ಷಿ ಧೋನಿ, ಧೋನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಸಾಕ್ಷಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.
ಧೋನಿ, ಸಾಕು ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಕುದುರೆ ಮೈ ಮಸಾಜ್ ಮಾಡ್ತಿರುವ ವಿಡಿಯೋವನ್ನು ಸಾಕ್ಷಿ ಧೋನಿ ಈಗ ಹಂಚಿಕೊಂಡಿದ್ದಾರೆ. ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಅಭಿಮಾನಿಗಳ ಜೊತೆ ಸೆಲೆಬ್ರಿಟಿಗಳು ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಡಿಯೋಕ್ಕೆ 4 ಲಕ್ಷಕ್ಕೂ ಹೆಚ್ಚು ಲೈಕ್ ಬಂದಿದೆ. 3500 ಕ್ಕೂ ಹೆಚ್ಚು ಕಮೆಂಟ್ ಬಂದಿದೆ. ನಟಿ ಬಿಪಾಷಾ ಬಸು ಕೂಡ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಅರೆರೆರೆರೆ…ಎಂದು ಬಿಪಾಷಾ ಕಮೆಂಟ್ ಮಾಡಿದ್ದಾರೆ.
ಧೋನಿಗೆ ಸಾಕುಪ್ರಾಣಿಗಳೆಂದ್ರೆ ಇಷ್ಟ. ನಾಲ್ಕೈದು ನಾಯಿಗಳನ್ನು ಧೋನಿ ಸಾಕಿದ್ದಾರೆ. ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಜೊತೆಗಿರುವ ವಿಡಿಯೋಗಳನ್ನು ಸಾಕ್ಷಿ ಹಂಚಿಕೊಳ್ತಿರುತ್ತಾರೆ.
https://www.instagram.com/reel/CPYTQXdHAOj/?utm_source=ig_embed&ig_rid=f4f04957-a972-47f8-bae9-815e40cd3881