ಅಮೆರಿಕ ನೌಕಾಪಡೆಯ ಹಡಗುಗಳ ಮೇಲೆ ಅನಾಮಿಕ ಹಾರುವ ವಸ್ತುಗಳು (ಯುಎಫ್‌ಓ) ತನಿಖಾ ಚಿತ್ರನಿರ್ಮಾಪಕ ಜೆರೆಮಿ ಕಾರ್ಬೆಲ್ ಬಿಡುಗಡೆ ಮಾಡಿದ ಫುಟೇಜ್ ಒಂದರಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋ ಅಸಲಿಯಾದದ್ದು ಎಂದು ಅಮೆರಿಕ ರಕ್ಷಣಾ ಇಲಾಖೆಯೂ ಖಾತ್ರಿಪಡಿಸಿದ್ದು, ಯುಎಫ್‌ಓ ಪತ್ತೆಯಾಗಿದ್ದರ ಸಂಬಂಧ ತನಿಖೆ ನಡೆಸಲಾಗುತ್ತಿದೆ.
12ರಿಂದ 15 ವಯಸ್ಸಿನವರಿಗೆ ಫೈಜರ್ ಲಸಿಕೆ ನೀಡಲು ಅನುಮತಿ
ಕ್ಲಿಪ್‌ನಲ್ಲಿ ಒಂಬತ್ತು ಯುಎಫ್‌ಓಗಳು ರೇಡಾರ್ ಸ್ಕ್ರೀನ್‌ನಲ್ಲಿ ಪತ್ತೆಯಾಗಿರುವುದನ್ನು ನೋಡಬಹುದಾಗಿದೆ. ಈ ಯುಎಫ್‌ಓಗಳು ಗಂಟೆಗೆ 70-250ಕಿಮೀ ವೇಗದಲ್ಲಿ ಹಾರಾಡುತ್ತಿದ್ದವು ಎಂದು ಇನ್‌ಸ್ಟಗ್ರಾಂ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಡಿಜಿಟಲೀಕರಣಗೊಳ್ಳಲಿದೆ ಶ್ರೀರಂಗಂ ದೇವಸ್ಥಾನದ ತಾಳೆ ಗರಿ
ಈ ವಿಡಿಯೋವನ್ನು ಯುಎಸ್‌ಎಸ್ ಒಮಾಹಾ ನೌಕೆಯ ಕಮಾಂಡ್ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದ್ದು ಎಂದು ಕಾರ್ಬೆಲ್ ತಿಳಿಸಿದ್ದಾರೆ. 2019 ರಲ್ಲಿ ಸೆರೆಯಾಗಿದ್ದ ಈ ಫುಟೇಜ್ ಅನ್ನು ರಹಸ್ಯ ಕಡತಗಳಿಂದ ತೆರವುಗೊಳಿಸಲಾಗಿದೆ ಎಂದು ಕಾರ್ಬೆಲ್ ತಿಳಿಸಿದ್ದಾರೆ.
https://www.instagram.com/p/CPYybKyJ6iU/?utm_source=ig_web_copy_link