ಧಾರವಾಡ: ಕೋವಿಡ್ ಲಾಕ್ಡೌನ್ ನಿಂದ ಸಂಕಷ್ಠಕ್ಕೀಡಾಗಿರುವ ವಿವಿಧ ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ನ್ನು ರಾಜ್ಯ ಸರ್ಕಾರವು ಘೋಷಿಸಿದೆ.
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ(ಮ್ಯಾನ್ಯುಯಲ್ ಆಗಿ ನೊಂದಣಿಯಾದ ಮತ್ತು ಆನ್ಲೈನ್ ಸೇವಾ ಸಿಂಧು ಮೂಲಕ ನೋಂದಣಿಯಾದ) ಅವರ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ನೇರವಾಗಿ 3000 ರೂ.ಗಳನ್ನು ಡಿ.ಬಿ.ಟಿ ಮೂಲಕ ವರ್ಗಾಯಿಲಾಗುವುದೆಂದು ಕಲಘಟಗಿ ಕಾರ್ಮಿಕ ನಿರೀಕ್ಷಕರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯಾರು ಅರ್ಜಿಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಕಾರ್ಮಿಕರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಮದ್ಯವರ್ತಿಗಳ ಹತ್ತಿರ ಹೋಗಬಾರದೆಂದು ತಿಳಿಸಿದ್ದಾರೆ.