alex Certify ಗುಡ್​ ನ್ಯೂಸ್​: ಮಾರ್ಚ್ 2ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಷ್ಟು ಕಡಿಮೆಯಾಗಿದೆ ‘ಕೊರೊನಾ’ ಸೋಂಕಿತರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್​: ಮಾರ್ಚ್ 2ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಷ್ಟು ಕಡಿಮೆಯಾಗಿದೆ ‘ಕೊರೊನಾ’ ಸೋಂಕಿತರ ಸಂಖ್ಯೆ

ಬರೋಬ್ಬರಿ 11 ವಾರಗಳ ಬಳಿಕ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 1000ಕ್ಕಿಂತ ಕಡಿಮೆ ವರದಿಯಾಗಿದೆ. ಮುಂಬೈ ಶುಕ್ರವಾರ 929 ಕೊರೊನಾ ಪ್ರಕರಣಗಳನ್ನ ವರದಿ ಮಾಡಿದೆ. ಇದು ಮಾರ್ಚ್​ 2ರ ಬಳಿಕ ವರದಿಯಾದ ಅತ್ಯಂತ ಕಡಿಮೆ ಕೊರೊನಾ ಪ್ರಕರಣವಾಗಿದೆ.

ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 30 ಮಂದಿ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಅಲ್ಲದೇ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಸಹ 94 ಪ್ರತಿಶತಕ್ಕೆ ಏರಿಕೆ ಕಂಡಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಾರ್ಚ್​ 2ರಲ್ಲಿ ಮುಂಬೈನಲ್ಲಿ 849 ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ಇದಾದ ಬಳಿಕ ಕೊರೊನಾ ಪ್ರಕರಣಗಳು 1000ಕ್ಕಿಂತ ಹೆಚ್ಚು ವರದಿಯಾಗುತ್ತಿದ್ದವು.

ಮಹಾರಾಷ್ಟ್ರದಲ್ಲಿ 10 ರಿಂದ 15 ಜಿಲ್ಲೆಗಳಲ್ಲಿ ಕೊರೊನಾ ಸೊಂಕಿನ ಪ್ರಮಾಣ ಇನ್ನೂ ಹೆಚ್ಚಿದೆ. ಅಲ್ಲದೇ ಇದರ ಜೊತೆಯಲ್ಲಿ ಹೆಚ್ಚುತ್ತಿರುವ ಬ್ಲಾಕ್​ ಫಂಗಸ್​ ಸಹ ಆತಂಕಕ್ಕೆ ಕಾರಣವಾಗಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದರು.

ಕೊರೊನಾ ಎರಡನೆ ಅಲೆ ವಿರುದ್ಧ ಹೋರಾಡುತ್ತಿರುವ ಮಹಾರಾಷ್ಟ್ರ ಏಪ್ರಿಲ್ ಮಧ್ಯವಾರದಿಂದಲೇ ಲಾಕ್​ಡೌನ್​ ಆದೇಶ ಜಾರಿ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...