ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ. ಪ್ರತಿ ದಿನ ದೇವಿ ಲಕ್ಷ್ಮಿ ಆರಾಧನೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಶುಕ್ರವಾರ ಸಂಜೆ ತಾಯಿ ಲಕ್ಷ್ಮಿಯನ್ನು ಪದ್ಧತಿಯಂತೆ ಆರಾಧನೆ ಮಾಡಿದಲ್ಲಿ ಸಂಪತ್ತಿನ ವೃದ್ಧಿಯಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶುಕ್ರವಾರದ ದಿನ ಶುಕ್ರ ಗ್ರಹದ ದಿನ. ಶುಕ್ರವನ್ನು ಸೌಂದರ್ಯ, ಸಮೃದ್ಧಿ, ವೈಭವ, ಕಲೆ, ಸಂಗೀತ, ಎಲ್ಲ ರೀತಿಯ ಲೌಕಿಕ ಸುಖಗಳ ಅಂಶವೆಂದು ಪರಿಗಣಿಸಲಾಗಿದೆ.
ಶುಕ್ರವಾರ ರಾತ್ರಿ 9-10 ಗಂಟೆಯ ಸಮಯದಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡಬೇಕು. ಇದ್ರಿಂದ ಹಣಕಾಸಿನ ಸಮಸ್ಯೆ ದೂರವಾಗಿ ಆರ್ಥಿಕ ಸಮೃದ್ಧಿ ಸಿಗಲಿದೆ.
ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರ ಮಾಡುತ್ತೆ ಈ ಉಪಾಯ
ಗುಲಾಬಿ ಬಣ್ಣ, ಶುಕ್ರ ಮತ್ತು ತಾಯಿ ಲಕ್ಷ್ಮಿಯ ನೆಚ್ಚಿನ ಬಣ್ಣವಾಗಿದೆ. ರಾತ್ರಿ ಲಕ್ಷ್ಮಿ ಪೂಜೆ ವೇಳೆ ಗುಲಾಬಿ ಬಟ್ಟೆಗಳನ್ನು ಧರಿಸಿ. ಇದ್ರಿಂದ ತಾಯಿ ಲಕ್ಷ್ಮಿ ಪ್ರಸನ್ನಗೊಳ್ಳುತ್ತಾಳೆ. ಜಾತಕದಲ್ಲಿ ಶುಕ್ರ ಬಲ ಪಡೆಯುತ್ತಾನೆ.
ದೊಡ್ಡ ನಷ್ಟದ ‘ಮುನ್ಸೂಚನೆ’ ನೀಡುತ್ತೆ ಈ ಘಟನೆ
ತಾಯಿ ಲಕ್ಷ್ಮಿ ವಿಗ್ರಹವನ್ನು ಗುಲಾಬಿ ಬಣ್ಣದ ಬಟ್ಟೆ ಮೇಲಿಡಿ. ಅದರ ಮೇಲೆ ಶ್ರೀಯಂತ್ರವನ್ನು ಇಡಿ.
ಹಸುವಿನ ತುಪ್ಪದಲ್ಲಿ 8 ದೀಪ ಹಚ್ಚಿ. ಸುಂಗಧ ದ್ರವ್ಯಗಳನ್ನು ಹಚ್ಚಿ. ತಾಯಿ ಲಕ್ಷ್ಮಿಯ ಪೂಜೆಯನ್ನು ಶ್ರದ್ಧಾ – ಭಕ್ತಿಯಿಂದ ಮಾಡಿ.