ದುಬೈ: ಪತಿಯ ಮೊಬೈಲ್ ಪರಿಶೀಲಿಸಿದ ಪತ್ನಿಗೆ 5431 ದಿರ್ಹಾಮ್(ಸುಮಾರು 1 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ.
ಮಹಿಳೆಯೊಬ್ಬಳು ರಹಸ್ಯವಾಗಿ ತನ್ನ ಗಂಡನ ಮೊಬೈಲ್ ಪರಿಶೀಲಿಸಿದ್ದಲ್ಲದೇ ಅದರಲ್ಲಿದ್ದ ಖಾಸಗಿಫೋಟೋ ಮತ್ತು ವಿಡಿಯೋಗಳನ್ನೂ ತನ್ನ ಸಂಬಂಧಿಕರಿಗೆ ಕಳುಹಿಸಿದ್ದಳು. ಅರಬ್ ಮಹಿಳೆಯ ಇಂತಹ ಕೃತ್ಯದ ಬಗ್ಗೆ ವಿಚಾರಣೆ ಆಲಿಸಿದ ದುಬೈ ಸ್ಥಳೀಯ ನ್ಯಾಯಾಲಯ 1.07 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮಡದಿ ನನ್ನ ಖಾಸಗಿತನಕ್ಕೆ ಧಕ್ಕೆ ತಂದಿದ್ದಾಳೆ. ನನ್ನ ಇಮೇಜ್ ಗೆ ಧಕ್ಕೆ ತರಲು ಮೊಬೈಲ್ನಲ್ಲಿದ್ದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನೂ ಸಂಬಂಧಿಕರಿಗೆ ಕಳುಹಿಸಿದ್ದಾಳೆ. ದೂರು, ವಕೀಲರ ಭೇಟಿ ಮೊದಲಾದ ಪ್ರಕ್ರಿಯೆಗಳ ಕಾರಣ ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ. ಇದರಿಂದ ಸಂಬಳ ಕಡಿತವಾಗಿದೆ. ವಕೀಲರಿಗೆ ಕೊಡಲು ಕೂಡ ಹಣವಿಲ್ಲ ಎಂದು ಮಹಿಳೆಯ ಗಂಡ ಎಮಾರತ್ ಅಲ್ ಯೊಮ್ ದೂರು ನೀಡಿದ್ದ.
ವಿಚಾರಣೆ ನಡೆಸಿದ ದುಬೈನ ರಾಸ್ ಅಲ್ ಖೈಮಾದ ಕೋರ್ಟ್ ಮಹಿಳೆಗೆ ದಂಡ ವಿಧಿಸಿದೆ. ಗಂಡನ ಕಾನೂನು ವೆಚ್ಚವನ್ನು ಕೂಡ ಭರಿಸಬೇಕೆಂದು ಆದೇಶಿಸಿದೆ. ಪತ್ನಿಯ ಕೃತ್ಯದಿಂದ ಆತನ ಖಾಸಗಿತನಕ್ಕೆ ಧಕ್ಕೆ ತಂದಿರುವುದನ್ನು ಒಪ್ಪಿಕೊಂಡ ನ್ಯಾಯಾಲಯ, ಘಟನೆಯಿಂದ ವೇತನ ಕಡಿತವಾಗಿದೆ ಎಂಬ ವಾದವನ್ನು ತಳ್ಳಿ ಹಾಕಿದೆ.