ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಡಿ.ಆರ್.ಡಿ.ಒ. ಅಭಿವೃದ್ಧಿಪಡಿಸಿದ ‘2 –ಡಿಜಿ’ ಔಷಧದ ಎರಡನೇ ಕಂತು ಇಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಶುಕ್ರವಾರ ‘2 –ಡಿಜಿ’ ಔಷಧ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ವಾಣಿಜ್ಯ ಬಳಕೆಗಾಗಿ ಔಷಧವನ್ನು ಮಾರುಕಟ್ಟೆಗೆ ಬಿಡಲಾಗುವುದು. 10 ಸಾವಿರ ಸ್ಯಾಚೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.
ಪುಡಿ ರೂಪದಲ್ಲಿರುವ ಈ ಔಷಧವನ್ನು DRDO ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್ ನಲ್ಲಿ ರೆಡ್ಡಿಸ್ ಲ್ಯಾಬೋರೇಟರಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಧ್ಯಮ ಮತ್ತು ತೀವ್ರ ಪ್ರಮಾಣದ ಕೊರೋನಾ ಸೋಂಕಿತರಿಗೆ ಈ ಔಷಧ ನೀಡಲು ಒಪ್ಪಿಗೆ ಸಿಕ್ಕಿದ್ದು, ಬಾಯಿಯಿಂದ ತೆಗೆದುಕೊಳ್ಳಬಹುದಾದ ಪುಡಿ ರೂಪದ ಔಷಧವನ್ನು ಕೊರೋನಾ ವಿರುದ್ಧದ ಸಂಜೀವಿನಿ ಎಂದು ಹೇಳಲಾಗಿದೆ.