BIG NEWS: ಬ್ಲಾಕ್ ಫಂಗಸ್ ಗೆ ʼರಾಮಬಾಣʼವಾಗಿರುವ Amphotericin B ಇಂಜೆಕ್ಷನ್ 1200 ರೂ. ಗಳಿಗೆ ಲಭ್ಯ 27-05-2021 1:17PM IST / No Comments / Posted In: Corona, Corona Virus News, Latest News, India ಮಹಾರಾಷ್ಟ್ರ ಮೂಲದ ಜೆನಿಟಿಕ್ ಲೈಫ್ ಸೈನ್ಸ್ ಗುರುವಾರದಿಂದ ಆಂಫೊಟೆರಿಸಿನ್ ಬಿ ಎಮಲ್ಷನ್ ಚುಚ್ಚುಮದ್ದನ್ನ ತಯಾರಿಸುವ ಕಾರ್ಯ ಆರಂಭಿಸಿದೆ. ಇದು ಬ್ಲಾಕ್ ಫಂಗಸ್ ವಿರುದ್ಧದ ಚಿಕಿತ್ಸೆಯಲ್ಲಿ ಬಳಸುವ ಚುಚ್ಚುಮದ್ದಾಗಿದ. ಬ್ಲಾಕ್ ಫಂಗಸ್ ಅನ್ನೋದು ಶಿಲೀಂದ್ರ ಸಂಬಂಧಿ ಕಾಯಿಲೆಯಾಗಿದ್ದು, ಕೊರೊನಾದಿಂದ ಗುಣಮುಖರಾದವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಬ್ಲಾಕ್ ಫಂಗಸ್ ಕೇಸ್ ಏರಿಕೆಯಾದ ಹಿನ್ನೆಲೆ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿಗೆ ಕೊರತೆ ಉಂಟಾಗಿದೆ. ಚುಚ್ಚುಮದ್ದಿನ ವಿಚಾರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿ , ಕೋವಿಡ್ ಸೋಂಕಿನ ಬಳಿಕ ಅನೇಕರಲ್ಲಿ ಕಾಣಿಸಿಕೊಳ್ತಿರುವ ಬ್ಲಾಕ್ ಫಂಗಸ್ ವಿರುದ್ಧ ನೀಡಲಾಗುವ ಆಂಫೋಟೆರಿಸಿನ್ ಚುಚ್ಚುಮದ್ದನ್ನ ಜೆನಿಟಿಕ್ ಲೈಫ್ ಸೈನ್ಸ್ ಕಂಪನಿ ಉತ್ಪಾದಿಸಿದೆ. ಇಲ್ಲಿಯವರೆಗೆ ಭಾರತದ ಏಕೈಕ ಕಂಪನಿ ಈ ಚುಚ್ಚುಮದ್ದನ್ನ ತಯಾರಿಸುತ್ತಿತ್ತು. ನಿತಿನ್ ಗಡ್ಕರಿಯವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಟ್ವೀಟಾಯಿಸಿದೆ. ಇಂಜೆಕ್ಷನ್ಗೆ 1200 ರೂಪಾಯಿ ನಿಗದಿ ಮಾಡಲಾಗಿದ್ದು, ಸೋಮವಾರದಿಂದ ಚುಚ್ಚುಮದ್ದು ಲಸಿಕೆಯ ವಿತರಣೆ ಆರಂಭವಾಗಲಿದೆ ಎಂದೂ ನಿತಿನ್ ಗಡ್ಕರಿ ಕಚೇರಿಯಿಂದ ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ. ಇಲ್ಲಿಯವರೆಗೆ ಈ ಇಂಜೆಕ್ಷನ್ 7 ಸಾವಿರ ರೂಪಾಯಿ ದರದಲ್ಲಿ ಮಾರಾಟವಾಗುತ್ತಿತ್ತು. ದೇಶದಲ್ಲಿ ಬ್ಲಾಕ್ ಫಂಗಸ್ ಕೇಸ್ ಹೆಚ್ಚಾಗುತ್ತಿದ್ದಂತೆಯೇ ಪ್ರಧಾನಿ ಮೋದಿ ಹೇಗಾದರೂ ಮಾಡಿ ವಿಶ್ವದ ಯಾವುದೇ ಮೂಲೆಯಿಂದಾದರೂ ಸರಿ ಚುಚ್ಚುಮದ್ದನ್ನ ತರಿಸುವಂತೆ ಸೂಚನೆ ನೀಡಿದ್ದರು. केंद्रीय मंत्री श्री @nitin_gadkari जी की कोशिशों से कोविड के बाद तेज़ी से फैल रहे ब्लैक फंगस इन्फेक्शन के इलाज के लिये वर्धा में जेनेटेक लाईफ सायन्सेस ने Amphotericin B Emulsion इंजेक्शन तयार कर लिया है। अब तक भारत में एक ही कंपनी इसका उत्पाद करती थी। pic.twitter.com/X5M0IsCnp2 — Office Of Nitin Gadkari (@OfficeOfNG) May 27, 2021