ಅತ್ಯಂತ ತೀವ್ರವಾದ ’ಯಾಸ್’ ಚಂಡಮಾರುವ ಒಡಿಶಾ-ಬಂಗಾಳ ಗಡಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಭಾರೀ ವಿಧ್ವಂಸಕಾರಿಯಾಗುವ ಲಕ್ಷಣಗಳನ್ನು ತೋರುತ್ತಿದೆ.
ರಕ್ಷಣಾ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಈ ಸಂಬಂಧ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇವುಗಳ ಪೈಕಿ ಒಂದು ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ತಾವು ಮನೆಯಿಂದ ಇಂಥ ಸಂದರ್ಭದಲ್ಲೂ ಹೊರಗೆ ಬಂದಿದ್ದೇಕೆ ಎಂದು ಕೊಟ್ಟ ವಿಶಿಷ್ಟ ಉತ್ತರವೊಂದು ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.
ಶಾಸಕನ ಅಮಾನವೀಯ ನಡೆಗೆ ಮೃತಪಟ್ಟ ವೈದ್ಯ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ರೂ ನೆರವಿಗೆ ಬಾರದೇ ನಿರ್ಲಕ್ಷ್ಯ
ಮಾಧ್ಯಮವೊಂದರ ವರದಿಗಾರರು, “ನೀವೂ ಸಹ ಮನೆಯಿಂದ ಹೊರಗೆ ಬಂದಿದ್ದೀರಿ” ಎಂದು ತನಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಈ ವ್ಯಕ್ತಿ, “ನಾನು ಹೊರಗೆ ಬರದೇ ಇದ್ದರೆ ನಿಮಗೆ ಸುದ್ದಿಯಾದರೂ ಹೇಗೆ ಸಿಗುತ್ತದೆ…?” ಎಂದು ಮರುಪ್ರಶ್ನೆ ಎಸೆದಿದ್ದಾರೆ.
ಕೋತಿಗಳಿಗೆ ಚಿಪ್ಸ್ ನೀಡಲು ಹೋಗಿ ಕೆಲಸ ಕಳೆದುಕೊಂಡ ಮಹಿಳೆ….!
ಈ ವಿಡಿಯೋವನ್ನು ಕಂಡು ಫಿದಾ ಆದ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ, ತಮ್ಮದೊಂದು ಕ್ಯಾಪ್ಷನ್ ಕೊಟ್ಟು, “ಎಂಥ ಸಹೃದಯಿ ಮನುಷ್ಯ. ಮಾನವೀಯತೆಗೆ ಏನೆಲ್ಲಾ ಮಾಡುತ್ತಿದ್ದಾರೆ’’ ಎಂದು ಹೇಳಿದ್ದಾರೆ.
https://twitter.com/arunbothra/status/1397495388588806147?ref_src=twsrc%5Etfw%7Ctwcamp%5Etweetembed%7Ctwterm%5E1397495388588806147%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fcyclone-yaas-odisha-west-bengal-viral-video-3779228.html