alex Certify ಕೋವಿಡ್‌ ಸೋಂಕಿತ 15 ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಆಂಬುಲೆನ್ಸ್ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಸೋಂಕಿತ 15 ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ತಾಯಿ ಅಂತ್ಯಕ್ರಿಯೆ ನೆರವೇರಿಸಿದ ಆಂಬುಲೆನ್ಸ್ ಚಾಲಕ

ತನ್ನ ತಾಯಿಯ ಅಗಲಿಕೆಯ ಸುದ್ದಿ ಕೇಳಿದ ಬಳಿಕವೂ ಕೋವಿಡ್-19 ಪೀಡಿತ 15 ಮಂದಿಯನ್ನು ತನ್ನ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆ ಸೇರಿಸಿದ ಬಳಿಕವೇ ಬಂದು ಹೆತ್ತವಳ ಅಂತ್ಯಸಂಸ್ಕಾರ ಮಾಡುವ ಮೂಲಕ ಮಥುರಾದ ಆಂಬುಲೆನ್ಸ್‌ ಚಾಲಕರೊಬ್ಬರು ಮಾನವೀಯ ಸ್ಪೂರ್ತಿಯ ಸಾಕಾರರೂಪವಾಗಿ ಮೆರೆದಿದ್ದಾರೆ.

ಮೇ 15ರಂದು ಜರುಗಿದ ಈ ಘಟನೆಯಲ್ಲಿ, ಪ್ರಭಾತ್‌ ಎಂಬ ಆಂಬುಲೆನ್ಸ್ ಚಾಲಕನಿಗೆ ತನ್ನ ತಾಯಿಯ ಅಗಲಿಕೆಯ ಸುದ್ದಿ ಬಂದ ವೇಳೆ ಅವರು ಕೋವಿಡ್‌-19 ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಬರುತ್ತಿದ್ದ ಕರೆಗಳನ್ನು ಸ್ವೀಕರಿಸುವುದರಲ್ಲಿ ಬ್ಯುಸಿ ಆಗಿಬಿಟ್ಟಿದ್ದರು. ಕರುಳು ಸಂಕಟದ ನಡುವೆಯೂ ತಮ್ಮ ಕರ್ತವ್ಯ ಬಿಡದ ಪ್ರಭಾತ್‌ ಇಡೀ ದೇಶಕ್ಕೇ ಮಾದರಿಯಾಗಿಬಿಟ್ಟಿದ್ದಾರೆ.

ತಮ್ಮ ಕರ್ತವ್ಯ ಮುಗಿದ ಬಳಿಕ ಮಥುರಾದಿಂದ 200 ಕಿಮೀ ದೂರದಲ್ಲಿರುವ ಮೈನ್ಪುರಿ ಎಂಬ ತಮ್ಮ ಊರಿನಲ್ಲಿ ತಾಯಿಯ ಅಂತ್ಯಕ್ರಿಯೆ ಮುಗಿಸಿದ್ದಾರೆ.

ಜಿಂದಾಲ್ ಗೆ 3667 ಎಕರೆ ಜಮೀನು ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ, ವಾಪಸ್ ಗೆ ಹೆಚ್ಚಿದ ಒತ್ತಡ

“ನಾನು ತಲ್ಲಣಗೊಂಡಿದ್ದೆ. ಆದರೆ ನಿಯಂತ್ರಣ ಪಡೆದುಕೊಂಡು ಕೆಲಸ ಮುಂದುವರೆಸಬೇಕಿತ್ತು. ನಾನು ಮಾಡುತ್ತಿದ್ದ ಕೆಲಸವನ್ನು ಬಿಡಲು ಸಾಧ್ಯವಿರಲಿಲ್ಲ. ನಾವು ಮಾಡುವ ಕೆಲಸ ಕ್ರಿಟಿಕಲ್ ಆಗಿರುವಂಥದ್ದು” ಎನ್ನುತ್ತಾರೆ ಪ್ರಭಾತ್‌.

ಮಥುರಾದ 102 ಹಾಗೂ 108 ಆಂಬುಲೆನ್ಸ್‌ ಸೇವೆಯ ಕಾರ್ಯನಿರ್ವಾಹಕ ಮ್ಯಾನೇಜರ್‌ ಅಜಯ್‌ ಸಿಂಗ್, ಪ್ರಭಾತ್‌ಗೆ ತಮ್ಮ ಊರು ತಲುಪಲು ವಾಹನದ ವ್ಯವಸ್ಥೆ ಮಾಡಿದ್ದರು.

ಡಬಲ್ ಮಾಸ್ಕ್ ಅಂದ್ರೇನು…? ಯಾವ ಮಾಸ್ಕ್ ಮೇಲೆ ಯಾವ ಮಾಸ್ಕ್ ಧರಿಸಬೇಕು…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ತಮ್ಮ ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೂಡಲೇ ಕರ್ತವ್ಯಕ್ಕೆ ಎಂದಿನಂತ ಹಾಜರಾದ ಪ್ರಭಾತ್‌, ಜೀವಗಳನ್ನು ಉಳಿಸುವ ತಮ್ಮ ಕರ್ತವ್ಯ ಮುಂದುವರೆಸುತ್ತಿದ್ದಾರೆ. ಕಳೆದ ಜುಲೈನಲ್ಲಿ ಕೋವಿಡ್‌‌ನಿಂದ ತಮ್ಮ ತಂದೆ ಕೊನೆಯುಸಿರೆಳೆದ ವೇಳೆಯೂ ಪ್ರಭಾತ್‌‌ ಹೀಗೆ ತ್ವರಿತವಾಗಿ ತಮ್ಮೂರಿಗೆ ತೆರಳಿ ಅಂತ್ಯಕ್ರಿಯೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು.

“ನನ್ನ ತಾಯಿ ಹೊರಟುಹೋದರು. ನಾನು ಕೆಲ ಜನರನ್ನು ಉಳಿಸಲು ಸಾಧ್ಯವಾದರೆ, ಆಕೆ ಹೆಮ್ಮೆ ಪಡುತ್ತಾಳೆ” ಎಂದು ಪ್ರಭಾತ್‌ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...