ಬ್ರಿಟನ್ನ ಸಣ್ಣ ಪಟ್ಟಣವೊಂದರ ಜನತೆ ಭಾನುವಾರ ವಿಚಿತ್ರ ಕಾರಣಕ್ಕಾಗಿ ಪವರ್ ಕಟ್ ಸಮಸ್ಯೆ ಎದುರಿಸಿದ್ರು. ಅಂದಹಾಗೆ ಇಡೀ ಊರಿಗೆ ಊರೇ ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನ ಎದುರಿಸೋಕೆ ಕಾರಣ ಬೆಕ್ಕಿನ ಮರಿ..!
ವಿದ್ಯುತ್ ಕಂಬವನ್ನ ಏರಿ ಕಂಬದ ತುತ್ತ ತುದಿಯಲ್ಲಿ ಕೂತಿದ್ದ ಬೆಕ್ಕಿನ ಮರಿಯನ್ನ ಕಾಪಾಡುವ ಸಲುವಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಪವರ್ ಕಟ್ ಮಾಡಿದ್ರು.
1 ವರ್ಷದ ಗ್ರೈಫಿಂಡೋರ್ ಎಂಬ ಹೆಸರಿನ ಬೆಕ್ಕಿನ ಮರಿ ಸುಮಾರು 8-10 ಗಂಟೆಗಳ ಕಾಲ ಇದೇ ರೀತಿ ಕಂಬದ ಮೇಲೆ ಕುಳಿತುಕೊಂಡಿದೆ.
ಇದನ್ನ ಬೆಕ್ಕಿನ ಮಾಲೀಕನ ಪುತ್ರ ನೋಡಿದ್ದಾರೆ. ಇದಾದ ಬಳಿಕ ಅಗ್ನಿಶಾಮಕದಳ ಸಿಬ್ಬಂದಿಗೆ ಸಹಾಯಕ್ಕಾಗಿ ಕರೆ ಮಾಡಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಐದು ನಿಮಿಷಗಳ ಕಾಲ ವಿದ್ಯುತ್ ಸಂಚಾರ ಸ್ಥಗಿತಗೊಳಿಸಿ ಬೆಕ್ಕಿನ ಮರಿಯನ್ನ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.