ಕೊರೊನಾ ವೈರಸ್ ಎರಡನೇ ಅಲೆ ಬಿಕ್ಕಟ್ಟಿನ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯುಎಸ್ ಮೂಲದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಕೊರೊನಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ದೇಹವು ಯಾವಾಗಲೂ ಕೊರೊನಾ ವಿರುದ್ಧ ಹೋರಾಡಲು ಸಿದ್ಧವಾಗಿರುತ್ತದೆ ಎಂದಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ರಕ್ಷಾಕವಚವಾಗಿರುವ ಪ್ರತಿಕಾಯಗಳು ಸದಾ ನಿಮ್ಮ ಜೊತೆಗಿರುತ್ತವೆ. ಕೊರೊನಾದಿಂದ ಚೇತರಿಸಿಕೊಂಡ 11 ತಿಂಗಳ ನಂತ್ರ ಮತ್ತೆ ಪ್ರತಿಕಾಯಗಳು ಬೆಳೆಯುತ್ತವೆ. ಸೌಮ್ಯ ಲಕ್ಷಣದಿಂದ ಚೇತರಿಸಿಕೊಂಡವರ ದೇಹದಲ್ಲಿ ಒಂದು ತಿಂಗಳ ನಂತ್ರವೂ ರೋಗನಿರೋಧಕ ಕೋಶಗಳು ವೈರಸ್ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಆಶ್ಚರ್ಯಕರ ಸಂಗತಿಯೆಂದರೆ ಈ ಪ್ರತಿಕಾಯಗಳು ಜೀವಿತಾವಧಿಯಲ್ಲಿ ಮಾನವ ದೇಹದಲ್ಲಿ ಉಳಿಯಬಹುದು. ಸ್ವಲ್ಪ ಕಾಳಜಿ ವಹಿಸಿದ್ರೆ ಕೊರೊನಾಕ್ಕೆ ಭಯಪಡದೆ ಇಡೀ ಜೀವನವನ್ನು ಕಳೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಹಿಂದೆ ಕೊರೊನಾ ಕಾಡಿದ ನಂತ್ರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎನ್ನಲಾಗಿತ್ತು. ಆದ್ರೆ ಅದು ತಪ್ಪು. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಪ್ರತಿಕಾಯಗಳು ದುರ್ಬಲವಾದ್ರೂ ಶೀಘ್ರವೇ ಅವು ಬಲಪಡೆಯುತ್ತವೆ ಎನ್ನಲಾಗಿದೆ.