alex Certify ಜೀವಂತವಿರುವಾಗಲೇ ಸರ್ಕಾರಿ ದಾಖಲೆಗಳಲ್ಲಿ ಮರಣ ಎಂದು ಘೋಷಣೆ..! ಶಾಕ್​ ಆದ ಸರ್ಕಾರಿ ಯೋಜನೆ ಫಲಾನುಭವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಂತವಿರುವಾಗಲೇ ಸರ್ಕಾರಿ ದಾಖಲೆಗಳಲ್ಲಿ ಮರಣ ಎಂದು ಘೋಷಣೆ..! ಶಾಕ್​ ಆದ ಸರ್ಕಾರಿ ಯೋಜನೆ ಫಲಾನುಭವಿ

ವ್ಯಕ್ತಿ ಮರಣವನ್ನಪ್ಪಿದ ಮೇಲೆ ಮರಣ ಪ್ರಮಾಣ ಪತ್ರವನ್ನ ಕುಟುಂಬಸ್ಥರಿಗೆ ನೀಡಲಾಗುತ್ತೆ. ಆದರೆ ಮಧ್ಯ ಪ್ರದೇಶದ ಚಾಂದೇರಿ ತೆಹ್ಸಿಲ್​​ ಎಂಬ ಗ್ರಾಮದ 24 ವರ್ಷದ ವ್ಯಕ್ತಿ ಬದುಕಿದ್ದಾಗಲೇ ಸರ್ಕಾರಿ ದಾಖಲೆಗಳು ಸತ್ತಿದ್ದಾನೆ ಎಂದು ಘೋಷಣೆ ಮಾಡಿದ್ದು ಇದೀಗ ಆ ವ್ಯಕ್ತಿ ಸರ್ಕಾರಿ ಕಚೇರಿಗೆ ಅಲೆಯುತ್ತಾ ನಾನಿನ್ನೂ ಬದುಕಿದ್ದೇನೆ ಸ್ವಾಮಿ ಎಂದು ಬಾಯಿ ಬಡಿದುಕೊಳ್ಳುವಂತಾಗಿದೆ.

ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!

ದಿನಗೂಲಿ ಕೆಲಸಗಾರನಾಗಿ ಕಾರ್ಯನಿರ್ವಹಿಸ್ತಾ ಇದ್ದ ಶಿವಕುಮಾರ್​ ಎಂಬಾತ 2018ರಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಜನ ಕಲ್ಯಾಣ ಸಂಭಾಲ್​ ಯೋಜನೆಗೆ ನೋಂದಾಯಿಸಿಕೊಂಡಿದ್ದ. ಇದಾದ ಬಳಿಕ ಗಂಡು ಮಗುವಿನ ಪೋಷಕರಾದ ಶಿವಕುಮಾರ್​ ದಂಪತಿ ಈ ಯೋಜನೆಯ ಮೂಲಕ 18 ಸಾವಿರ ರೂಪಾಯಿ ಪಡೆದುಕೊಂಡಿತ್ತು. ಇದಾದ ಬಳಿಕ ಹೆಣ್ಣು ಮಗು ಜನಿಸಿದ್ದು ಯೋಜನೆಯಡಿಯಲ್ಲಿ ಅನುದಾನ ಪಡೆಯಲು ತೆರಳಿದ್ದ ವೇಳೆ ಶಿವಕುಮಾರ್​ ಸರ್ಕಾರಿ ದಾಖಲೆಗಳ ಪ್ರಕಾರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಟ್ವಿಟರ್ ಗೆ ಸ್ಪರ್ಧೆ ನೀಡಲು ಕೂಗೆ ಸಿಕ್ಕಿದೆ ಆನೆ ಬಲ

ಇದಾದ ಬಳಿಕ ಗ್ರಾಮದ ಸರಪಂಚ್​ ಬಳಿ ತಾನಿನ್ನೂ ಬದುಕಿದ್ದೇನೆ ಎಂಬ ಪತ್ರವನ್ನ ಪಡೆದ ಶಿವಕುಮಾರ್​ ಇದನ್ನ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾನೆ. ಇನ್ನು ಈ ವಿಚಾರವಾಗಿ ಮಾತನಾಡಿದ ಶಿವಕುಮಾರ್​, ನನ್ನನ್ನ ಸರ್ಕಾರಿ ದಾಖಲೆಗಳ ಪ್ರಕಾರ 2019ರಲ್ಲೇ ಸತ್ತಿದ್ದೇನೆಂದು ಘೋಷಣೆ ಮಾಡಿದ್ದಾರೆ. ನನಗೆ ಇದನ್ನ ಕೇಳಿ ಶಾಕ್​ ಆಯ್ತು. ನಾನೇ ಶಿವಕುಮಾರ್​, ನಾನಿನ್ನೂ ಬದುಕಿದ್ದೇನೆಂದು ಹೇಳಿದರೂ ಇವರು ನಂಬುತ್ತಿಲ್ಲ. ಹೀಗಾಗಿ ನಾನೀಗ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ ಎಂದು ಅಳಲನ್ನ ತೋಡಿಕೊಂಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...