ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಿದೆ. ಆನ್ಲೈನ್ ಪೊರ್ಟಲ್ ಗಳಲ್ಲಿ ಮಾಡೆಲ್ ಗಳು ಧರಿಸುವ ಬಟ್ಟೆ ನೋಡಿ ಮನಸೋಲುವ ಲಲನೆಯರು ತಾವೂ ಹೀಗೆ ಕಾಣಬೇಕೆಂದು ಕನಸು ಕಾಣ್ತಾರೆ. ಇದೇ ಕಾರಣಕ್ಕೆ ಆ ಡ್ರೆಸ್ ಬುಕ್ ಮಾಡ್ತಾರೆ. ಆದ್ರೆ ಫೋಟೋದಲ್ಲಿ ತೋರಿಸೋದು ಬೇರೆ, ತಮಗೆ ಬರೋದು ಬೇರೆ ಎಂಬ ಸತ್ಯ ಅನೇಕರಿಗೆ ತಿಳಿದಿರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳು ತನಗಾದ ಮೋಸವನ್ನು ಹಂಚಿಕೊಂಡಿದ್ದಾಳೆ.
ಫೋಟೋದಲ್ಲಿದ್ದ ಸೆಕ್ಸಿ ಗೌನ್ ನೋಡಿ ಅದನ್ನು ಆರ್ಡರ್ ಮಾಡಿದ್ದಳಂತೆ. ಅದಕ್ಕೆ 32.30 ಡಾಲರ್ ಅಂದ್ರೆ ಸುಮಾರು 2 ಸಾವಿರ ರೂಪಾಯಿ ನೀಡಿದ್ದಳಂತೆ. ಆದ್ರೆ ಡ್ರೆಸ್ ಮನೆಗೆ ಬರ್ತಿದ್ದಂತೆ ದಂಗಾಗಿದ್ದಾಳೆ. ಡ್ರೆಸ್ ಫೋಟೋದಲ್ಲಿ ತೋರಿಸಿದಂತೆ ಇರಲಿಲ್ಲ. ಡ್ರೆಸ್ ನ ತೋಳುಗಳು ಭಿನ್ನವಾಗಿದ್ದವು. ಕಟ್ ಮೇಲಿರುವ ಬದಲು ಕೆಳಗಿತ್ತು.
ಮಾಡೆಲ್ ಧರಿಸಿದ ಡ್ರೆಸ್ ಹಾಗೂ ತನಗೆ ಬಂದ ಡ್ರೆಸ್ ಎರಡರ ಫೋಟೋ ತೆಗೆದು ಹುಡುಗಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 5 ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.