alex Certify ಪ್ರಿಯಕರನೊಂದಿಗಿದ್ದಾಗಲೇ ರೆಡ್ ಹ್ಯಾಂಡಾಗಿ ಹಿಡಿ ಎಂದ ಪತ್ನಿ, ಸವಾಲು ಸ್ವೀಕರಿಸಿ ಸರಸವಾಡುವಾಗಲೇ ಹಿಡಿದು ಥಳಿಸಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನೊಂದಿಗಿದ್ದಾಗಲೇ ರೆಡ್ ಹ್ಯಾಂಡಾಗಿ ಹಿಡಿ ಎಂದ ಪತ್ನಿ, ಸವಾಲು ಸ್ವೀಕರಿಸಿ ಸರಸವಾಡುವಾಗಲೇ ಹಿಡಿದು ಥಳಿಸಿದ ಪತಿ

ಸೂರತ್: ಗುಜರಾತ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಒಟ್ಟಿಗೆ ಕಟ್ಟಿಹಾಕಿ ಥಳಿಸಿದ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಗುಜರಾತ್ ನ ವಲ್ಸಾಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಪ್ರಿಯಕರನೊಂದಿಗೆ ಪತ್ನಿ ಇದ್ದಾಗಲೇ ಕಂಡ ಪತಿ ಆಕ್ರೋಶಗೊಂಡಿದ್ದು ಇಬ್ಬರನ್ನು ಕಟ್ಟಿ ಹಾಕಿ ಥಳಿಸಿದ್ದಾನೆ. ಆರೋಪಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿರುವುದಾಗಿ ಶಂಕಿಸಿ ಜಗಳವಾಡಿದ್ದ. ಇದರಿಂದ ಸಿಟ್ಟಾದ ಪತ್ನಿ ತನ್ನ ತಾಯಿಯೊಂದಿಗೆ ಕಾಜ್ಲಿ ಗ್ರಾಮದಲ್ಲಿ ವಾಸವಾಗಿದ್ದಾಳೆ.

ತವರಿಗೆ ಹೋಗುವ ಮೊದಲು ಆಕೆ, ಪ್ರಿಯಕರನ ಜೊತೆಗಿದ್ದ ವೇಳೆ ತನ್ನನ್ನು ರೆಡ್ ಹ್ಯಾಂಡಾಗಿ ಹಿಡಿದು ಅನುಮಾನವನ್ನು ಸಾಬೀತುಪಡಿಸುವಂತೆ ಗಂಡನಿಗೆ ಸವಾಲು ಹಾಕಿದ್ದಳು. ತವರು ಸೇರಿಕೊಂಡ ಪತ್ನಿಯ ನಡತೆ ಮೇಲೆ ಮೊದಲಿನಿಂದಲೂ ಅನುಮಾನ ಹೊಂದಿದ್ದ ಗಂಡ ಆಕೆಯ ಮೇಲೆ ಕಣ್ಣಿಟ್ಟಿದ್ದ. ಭಾನುವಾರ ಮಹಿಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇದನ್ನೇ ಕಾಯುತ್ತಿದ್ದ ಪತಿ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಜೊತೆಯಾಗಿದ್ದಾಗಲೇ ಸಿಕ್ಕಿಬಿದ್ದ ಪತ್ನಿ ಮತ್ತು ಪ್ರಿಯಕರನನ್ನು ಕಂಡ ಪತಿರಾಯ ಕೋಪದಿಂದ ಇಬ್ಬರನ್ನು ಮನೆಯ ಹೊರಗೆ ಎಳೆದುಕೊಂಡು ಹೋಗಿ ಕಟ್ಟಿಹಾಕಿ ಥಳಿಸಿದ್ದಾನೆ.

ಸ್ಥಳೀಯರು ಘಟನೆಯ ವಿಡಿಯೋ ಮಾಡಿಕೊಂಡಿದ್ದು ವಾಟ್ಸಾಪ್ನಲ್ಲಿ ಪ್ರಸಾರ ಮಾಡಿದ್ದಾರೆ. ಪೊಲೀಸರು ಮಹಿಳೆಗೆ ಕರೆ ಮಾಡಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ.

ನಾನಪೋಂಧ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್ ಆರ್.ಜೆ. ಗಮಿತ್ ಈ ಬಗ್ಗೆ ಮಾತನಾಡಿ, ಕ್ರಮಕೈಗೊಳ್ಳಲು ದೂರು ನೀಡುವಂತೆ ಮಹಿಳೆಯನ್ನು ಕೇಳಿದ್ದೆವು. ಆದರೆ ಅವರು ನಿರಾಕರಿಸಿದ್ದರು. ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...