ಅತ್ಯಂತ ವಿರಳವಾದ ಗುಲಾಬಿ ಬಣ್ಣದ 15.81 ಕ್ಯಾರಟ್ನ ವಜ್ರವು ಹಾಂಕಾಂಗ್ನಲ್ಲಿ ಬರೋಬ್ಬರಿ 29.3 ಮಿಲಿಯನ್ ಡಾಲರ್ ಮೌಲ್ಯಕ್ಕೆ ಸೇಲ್ ಆಗಿದೆ. ಇದು ವಿಶ್ವ ದಾಖಲೆಯ ಹರಾಜು ಬೆಲೆಯಾಗಿದೆ ಎಂದು ತಿಳಿದುಬಂದಿದೆ. ನೇರಳೆ ಗುಲಾಬಿ ಬಣ್ಣದ ಈ ವಜ್ರದ ಹೆಸರು ದಿ ಸಕುರಾ ಎಂದಾಗಿದೆ. ಇದು ಜಪಾನ್ನ ಚೆರ್ರಿ ಹೂವು ಎಂಬರ್ಥವನ್ನ ಹೊಂದಿದೆ.
ಈ ಅತ್ಯಂತ ವಿರಳವಾದ ವಜ್ರವನ್ನ ಪ್ಲಾಟಿನಂ ಉಂಗುರಕ್ಕೆ ಜೋಡಿಸಲಾಗಿದೆ. ಈ ವಿಶೇಷವಾದ ಉಂಗುರವನ್ನ ಯಾರು ಖರೀದಿ ಮಾಡಿದ್ದಾರೆ ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಉಂಗುರವನ್ನ ಏಷಿಯಾದ ಖಾಸಗಿ ಖರೀದಿದಾರರು ಕೊಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಕುರಾದ ಜೊತೆಯಲ್ಲಿ ಹೃದಾಯಾಕಾರದ ಸ್ವೀಟ್ ಹಾರ್ಟ್ ಎಂಬ ಹೆಸರಿನ 4.2 ಕ್ಯಾರಟ್ ವಜ್ರವನ್ನ 6.6 ಮಿಲಿಯನ್ ಡಾಲರ್ಗೆ ಖರೀದಿ ಮಾಡಲಾಗಿದೆ.