ಮೇ 26ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ವೃಶ್ಚಿಕ ರಾಶಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಆದ್ರೆ ಎಲ್ಲ ರಾಶಿಗಳ ಮೇಲೆ ಚಂದ್ರಗ್ರಹಣದ ಪ್ರಭಾವವಿರಲಿದೆ. ನಾಲ್ಕು ರಾಶಿಯವರಿಗೆ ಚಂದ್ರ ಗ್ರಹಣ ಕೆಲ ಸಮಸ್ಯೆ ತರಲಿದೆ.
ಮೇಷ ರಾಶಿಯವರಿಗೆ ಚಂದ್ರ ಗ್ರಹಣ ಕೆಲ ಸಮಸ್ಯೆ ತರಲಿದೆ. ಸಮಸ್ಯೆಗೆ ಕೋಪ ಪರಿಹಾರವಲ್ಲ. ಶಾಂತವಾಗಿ ಎಲ್ಲವನ್ನೂ ನಿಭಾಯಿಸಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಧನ ಲಾಭಕ್ಕೆ ಶುಭ ಸಂಕೇತ ಸಿಗಲಿದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಓಂ ಹೂಂ ಹನುಮಂತೆ ನಮಃ ಮಂತ್ರವನ್ನು ಜಪಿಸಿ.
ವೃಷಭ ರಾಶಿಯವರಿಗೆ ಕಷ್ಟ ಕಾಡಲಿದೆ. ಆದ್ರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ವೈವಾಹಿಕ ಜೀವನದಲ್ಲಿ ಅಶಾಂತಿ ಕಾಡಲಿದೆ. ಯಾರಿಗೂ ಕೆಟ್ಟ ಶಬ್ಧ ಬಳಸಬೇಡಿ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ನೀಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವೃಶ್ಚಿಕ ರಾಶಿಯವರು ಆರೋಗ್ಯ ಮತ್ತು ಮಾನಸಿಕ ಒತ್ತಡದ ಬಗ್ಗೆ ಗಮನ ನೀಡಬೇಕು. ಆರ್ಥಿಕ ನಷ್ಟ ಕಾಡಲಿದ್ದು, ಅನವಶ್ಯಕ ಖರ್ಚನ್ನು ಕಡಿಮೆ ಮಾಡಿ. ವೃತ್ತಿ ಜೀವನದಲ್ಲಿ ತೊಂದರೆ ಎದುರಾಗುವ ಸಾಧ್ಯತೆಯಿದೆ. ಚರ್ಚೆಗಳು, ವಿವಾದದಲ್ಲಿ ಸಿಲುಕಿಕೊಳ್ಳಬಹುದು. ಹೆತ್ತವರ ಆರೋಗ್ಯ ಹದಗೆಡಬಹುದು. ದೇವರ ಆರಾಧನೆ ಮಾಡಿ.
ಚಂದ್ರ ಗ್ರಹಣದ ಪ್ರಭಾವ ಕುಂಭ ರಾಶಿಯವರ ಮೇಲೂ ಆಗಲಿದೆ. ಕಿರಿಕಿರಿ ಇರಲಿದೆ. ವ್ಯವಹಾರದಲ್ಲಿ ನಷ್ಟವಾಗಲಿದೆ. ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡುವ ಅವಶ್ಯಕತೆಯಿದೆ. ದಿಢೀರ್ ನಿರ್ಧಾರ ತೆಗೆದುಕೊಳ್ಳಬೇಡಿ.