ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮಾಜಿ ಸಚಿವರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಈಗಲಾದರೂ ಆರೋಪಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಿರೇ ಎಂದು ಪ್ರಶ್ನಿಸಿದೆ.
ರಾಸಲೀಲೆ ಪ್ರಕರಣದ ಸಿಡಿಯಲ್ಲಿರುವುದು ನಾನಲ್ಲ ಎಂದು ಈವರೆಗೆ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇದೀಗ ಎಸ್ ಐ ಟಿ ವಿಚಾರಣೆ ವೇಳೆ ವಿಡಿಯೋದಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ. ಸಿಡಿ ಅಸಲಿ, ಅದು ತಾವೇ ಎಂದ ಮೇಲೆ ಮೊದಲು ನಿರಾಕರಿಸಿದ್ದು ಯಾಕೆ? ಎಸ್ ಐ ಟಿ ರಚನೆ ಮಾಡಿದ್ದು ಯಾಕೆ? ಜನರ ಹಣ ಪೋಲು ಮಾಡಿಸಿದ್ದು ಯಾಕೆ? ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ಪ್ರಶ್ನಿಸಿದೆ.
ಪುಣೆಯಲ್ಲಿ ಬ್ಲಾಕ್ ಫಂಗಸ್ ಸ್ಫೋಟ; 574 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು
ಆರೋಪಿ ಒಪ್ಪಿಕೊಂಡಿದ್ದಾಯ್ತು, ಗೃಹ ಸಚಿವ ಬೊಮ್ಮಾಯಿಯವರೇ ಇನ್ನಾದರೂ ಸಂತ್ರಸ್ತೆಯ ದೂರಿನ ಮೇರೆಗೆ ಬಂಧಿಸಿ ಕಾನೂನು ಪಾಲಿಸುತ್ತೀರಾ? ಎಂದು ಕೇಳಿದೆ.
ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್, ಉಚಿತ ಸ್ಮಾರ್ಟ್ ಫೋನ್ ವಿತರಣೆ: ಸುರೇಶ್ ಕುಮಾರ್ ಮಾಹಿತಿ
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ, ಸಿಡಿಯಲ್ಲಿದ್ದದ್ದು ತಾನೆ. ಯುವತಿಯ ಪರಿಚಯವೂ ಇದೆ. ಆಕೆ ಪ್ರಾಜೆಕ್ಟ್ ವರ್ಕ್ ಗಾಗಿ ನನ್ನ ಬಳಿ ಬಂದಿದ್ದಳು. ನಾನು ಅತ್ಯಾಚಾರ ಮಾಡಿಲ್ಲ, ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆದಿದೆ. ವಿಡಿಯೋ ರೆಕಾರ್ಡ್ ಮಾಡಿದ್ದು ನನಗೆ ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.